ನ ಗುರೋರಧಿಕಂ ನ ಗುರೋರಧಿಕಂ ನ ಗುರೋರಧಿಕಂ'
ಎಂಬ ಹರವಾಕ್ಯವನರಿದು,
ಲಿಂಗಾಚಾರಾದಿ ಪ್ರಾಣವಾಗಿ ಜಂಗಮನುಭಾವಪ್ರಸಿದ್ಧ
ಪ್ರಮಾಣಚರಿತೆಯನರಿಯದೆ
ಗೊಡ್ಡುಮಾತನೊಡ್ಡಿಕೊಂಡು ಎಡ್ಡೆಡ್ಡಿಂದೆ ವರ್ತಿಸುವ
ದಡ್ಡ ಕೋಟಲೆಯ ನೋಡಾ !
ಗುರುವೆನ್ನ ಕರಸ್ಥಲದಲುಂಟೆಂದು ಇರವ ಶೋಧಿಸಿ
ಜರಿದು ಹರಿದು ಹಿರಿಯರೆನಿಸಿ ಮೆರೆವ
ಗುರುದ್ರೋಹಿಗಳ ನೆರೆಯಲಾಗದು ನಡೆನುಡಿಸಂಪನ್ನರು
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
Art
Manuscript
Music
Courtesy:
Transliteration
Na gurōradhikaṁ na gurōradhikaṁ na gurōradhikaṁ'
emba haravākyavanaridu,
liṅgācārādi prāṇavāgi jaṅgamanubhāvaprasid'dha
pramāṇacariteyanariyade
goḍḍumātanoḍḍikoṇḍu eḍḍeḍḍinde vartisuva
daḍḍa kōṭaleya nōḍā!
Guruvenna karasthaladaluṇṭendu irava śōdhisi
jaridu haridu hiriyarenisi mereva
gurudrōhigaḷa nereyalāgadu naḍenuḍisampannaru
guruniran̄jana cannabasavaliṅga sākṣiyāgi.
ಸ್ಥಲ -
ಭಕ್ತಿತಾಮಸ ನಿರಸನಸ್ಥಲದ
ಉಳಿದ ವಚನಗಳು