Index   ವಚನ - 973    Search  
 
ಹರಮುನಿದರೆ ಗುರುಕಾಯುವ ಗುರುಮುನಿದರೆ ಹರಕಾಯನೆಂಬ ಮಹಾವಾಕ್ಯವನು ಕೇಳಿ ಕಂಡರಿದ ಹೃದಯವು ದುರಾಗ್ನಿಯಿಂದೆ ನಾಶವಾಯಿತ್ತೆ? ಛೀ ಅದೇತರ ಬಾಳುವೆ. ಗುರುವ ಮರೆದು ಲಿಂಗವನೊಲಿಸುವೆನೆಂದರೆ ಎಂದಿಗೂ ಆಗಬಾರದು. ಛೀ ಗುರುಮಾರ್ಗವೇ ಮಾರ್ಗ, ಛೀ ಗುರುಜ್ಞಾನವೇ ಜ್ಞಾನ, ಛೀ ಗುರು ಪರಿಣಾಮವೇ ಪರಿಣಾಮ. ಅದು ಕಾರಣ ಜಡಮೂಢ ಪ್ರಾಣಿಗಳಿರಾ, ಕರ್ಕಸಮಥನ ಕಡಲೊಳು ಮುಳುಗಿ ಹೋಗುವದಕಿಂತವೆ ಗುರುಕೃಪಾಂಬುಧಿಯೊಳ್ಮುಳುಗಿ ನಿಜ ನಿವಾಸಿಗಳಾಗಿರಿ ನಮ್ಮ ಗುರುನಿರಂಜನ ಚನ್ನಬಸವಲಿಂಗ ಮೆಚ್ಚುವಂತೆ.