Index   ವಚನ - 977    Search  
 
ಆಚಾರವೇ ಗುರು ವಿಚಾರವೇ ಶಿಷ್ಯನೆಂಬುದು ಸಹಜ. ಆಚಾರವೇ ಜ್ಞಾನ ವಿಚಾರವೇ ಭಕ್ತಿ, ಎರಡರ ಸಂಬಂಧವೇ ಘನ ಸಂಬಂಧವು. ಈ ಸುಖಾನಂದ ಸುಧೆಯೊಳು ಚರಿಸಲರಿಯದೆ, ಆಚಾರವ ಜರಿದು ಅವಿಚಾರಮುಖನಾದರೆ ಸಚರಾಚರದೊಳು ನಿಂದು ಸವೆಯದಾಯಾಸವೇ ಸಹಜ ಕಾಣಾ ಮುಂದೆ ಗುರುನಿರಂಜನ ಚನ್ನಬಸವಲಿಂಗಾ.