ಗೆಲ್ಲಸೋಲೆಂಬ ಕಲಿಧರ್ಮದಲ್ಲಿ ಗೆಲಬೇಕೆಂಬ
ನರ ಸುರ ಖಗ ಮೃಗ ಕೀಟ ಕ್ರಿಮಿಗಳೆಲ್ಲ ಹೆಣಗುತಿಪ್ಪವಲ್ಲದೆ
ಸೋಲಬೇಕೆಂಬ ಕುರುಹುಗಾಣದು ನೋಡಾ.
ಸೋಲದಲ್ಲಿ ಭವಮಾಲೆ ಬಲಿಯಿತ್ತು ಕಲಿಯುಗ ಕಳೆವೊಡೆಯಿತ್ತು.
ಅಂತಂತೆ ಶರಣಶಿವಾನುಕೂಲ.
ಸೋಲಬಾರದ ಕರ್ತು ಸೋತುಬಂದಲ್ಲಿ ಸೋತುಗೆಲ್ಲುವುದಪೂರ್ವ.
ಸೋತುಗೆಲ್ಲುವ ಸುಲಭವಳಿದು ಖ್ಯಾತಿವಡೆದು ಹೋಗಿ ಬಂದು ಹೋದರು
ಗುರುನಿರಂಜನ ಚನ್ನಬಸವಲಿಂಗಕೀತೆರವಾಗಿ.
Art
Manuscript
Music
Courtesy:
Transliteration
Gellasōlemba kalidharmadalli gelabēkemba
nara sura khaga mr̥ga kīṭa krimigaḷella heṇagutippavallade
sōlabēkemba kuruhugāṇadu nōḍā.
Sōladalli bhavamāle baliyittu kaliyuga kaḷevoḍeyittu.
Antante śaraṇaśivānukūla.
Sōlabārada kartu sōtubandalli sōtugelluvudapūrva.
Sōtugelluva sulabhavaḷidu khyātivaḍedu hōgi bandu hōdaru
guruniran̄jana cannabasavaliṅgakīteravāgi.
ಸ್ಥಲ -
ಭಕ್ತಿತಾಮಸ ನಿರಸನಸ್ಥಲದ
ಉಳಿದ ವಚನಗಳು