ಭಕ್ತನಾಚಾರ ಜಂಗಮಲಿಂಗಸನ್ನಿಹಿತ,
ಜಂಗಮದಾಚಾರ ಲಿಂಗಜಂಗಮಸನ್ನಿಹಿತ,
ಷಟ್ಕೃಷಿ ಸತ್ಕಾಯಕವೇ ಮುಕ್ತಿಯ ಬೀಡು,
ಭಕ್ತಂಗಾದರು ಸತ್ಕಾಯಕವೇಬೇಕು,
ಜಂಗಮಕ್ಕಾದರೂ ಸತ್ಕಾಯಕವೇಬೇಕು.
ಭಕ್ತಂಗಾಚರಣೆ, ಜಂಗಮಕ್ಕೆ ಸಂಬಂಧ.
ಅದೆಂತೆಂದೊಡೆ, ಜ್ಞಾನೋದಯವಾದ ಮಹಾತ್ಮನು
ಮಾಯಾನಿವೃತ್ತಿಯ ಮಾಡಿ
ತನುಸಂಬಂಧ ಸದ್ಗುರು
ಸಮ್ಮುಖೋಪಾವಸ್ತೆಯನೆಯಿದು ಕಂಡು,
ತನುತ್ರಯವನಿತ್ತು ದೀಕ್ಷಾತ್ರಯಾನ್ವಿತನಾಗಿ ಬಂದು
ಸರ್ವಾಚಾರಸಂಪತ್ತು ಶೋಭನಲೀಲೆಯ ನಟಿಸುವಲ್ಲಿ
ಸ್ಥಲಸ್ಥಲಂಗಳ ತಾಮಸಸುಳುಹಿಂಗೆ
ಸುಜ್ಞಾನಶಾಸ್ತ್ರವನು ಸುಚಿತ್ತದಲ್ಲಿ ಧರಿಸಿ
ಸಾಕಾರ ಸುದ್ರವ್ಯಂಗಳನು
ನಿರ್ವಂಚಕತ್ವ ತ್ರಿಕರಣ ಶುದ್ಧಾತ್ಮಕದಿಂದೆ
ಸಗುಣಜಂಗಮಲಿಂಗಸನ್ನಿಹಿತ
ಭೋಗೋಪಭೋಗಿಯಾಗಿಹುದೇ
ಶ್ರದ್ಧಾಭಕ್ತನಾಚಾರವಯ್ಯಾ.
ಆ ತದ್ಭಾವಸಮೇತ ನಿಜಲಿಂಗಜಂಗಮಸನ್ನಿಹಿತ
ಭೋಗೋಪಭೋಗಿಯಾಗಿಹುದೇ ಆಚಾರಲಿಂಗ ಜಂಗಮದ ಸ್ಥಲ.
ಇದು ಅಸಿಯೆಂಬ ವ್ಯಾಪಾರವಯ್ಯ.
ಆಚಾರಂಗ, ವಿಚಾರ ಮನ, ಸಮಯಾಚಾರ ಭಾವವೆಂಬ
ನಿರ್ಮಲಸುಕ್ಷೇತ್ರಂಕನಾಗಿ
ಸಾವಧಾನಮುಖಸುಖಭಕ್ತಿಯಿಂದೆ
ಸಾಕಾರಜಂಗಮಲಿಂಗಸನ್ನಿಹಿತ ಭೋಗೋಪಭೋಗಿಯಾಗಿಹುದೇ
ಸಾವಧಾನ ಪ್ರಸಾದಿಭಕ್ತನಾಚಾರವಯ್ಯಾ.
ತದ್ಭಾವಭರಿತನಾಗಿ ಸ್ವಯಂ ಲಿಂಗಜಂಗಮಸನ್ನಿಹಿತನಾಗಿಹುದೇ
ಶಿವಲಿಂಗಜಂಗಮಸ್ಥಲ.
ಇದು ಕೃಷಿಯೆಂಬ ವ್ಯಾಪಾರವಯ್ಯಾ.
ಮತ್ತೆ ಸ್ಥಲಸ್ಥಲಂಗಳಲ್ಲಿ ಭೇದಾಭೇದ
ಸದ್ವಿವೇಕಮುಖ ಲೇಖನ ಸ್ಥಾಪ್ಯ
ನಿರ್ಮಲನಿಷ್ಟಾಂಗನಾಗಿ ವೀರಜಂಗಮಲಿಂಗಸನ್ನಿಹಿತ
ಭೋಗೋಪಭೋಗಿಯಾಗಿಹುದೇ ನಿಷ್ಠಾಮಹೇಶ್ವರ ಭಕ್ತನಸ್ಥಲ.
ಅಂತಪ್ಪ ನಿಷ್ಠಾಂಗಮಂತ್ರಮೂರ್ತಿಯಾಗಿ
ನಿಜಲಿಂಗಜಂಗಮಭೋಗೋಪಭೋಗಿಯಾಗಿಹುದೇ
ಗುರುಲಿಂಗಜಂಗಮಸ್ಥಲ.
ಇದು ಮಸಿಯೆಂಬ ವ್ಯಾಪಾರವಯ್ಯಾ.
ಮತ್ತೆ ಸ್ಥಲಸ್ಥಲಂಗಳಲ್ಲಿ ದಶವಾಯುವಿನ ದಂದುಗವನು
ಸುಜ್ಞಾನಕ್ರಿಯಾಸಂಭಾಷಣೆಯಲ್ಲಡಗಿಸಿ
ಅಷ್ಟ ಕುಶಬ್ದ ಬಾಹ್ಯಪ್ರಣವ ಪರಿಪೂರ್ಣನಾಗಿ
ಅನುಭಾವಭಕ್ತಿಯಿಂದೆ, ಸತ್ಯಜಂಗಮಲಿಂಗಸನ್ನಿಹಿತ
ಭೋಗೋಪಭೋಗಿಯಾಗಿಹುದೇ ಪ್ರಾಣಲಿಂಗಿಭಕ್ತನಸ್ಥಲ.
ತದ್ಭಾವ ಪರಿಪೂರ್ಣನಾಗಿ ಅನುಭಾವ ಲಿಂಗಜಂಗಮ
ಭೋಗೋಪಭೋಗಿಯಾಗಿಹುದೇ ಚರಲಿಂಗ ಜಂಗಮಸ್ಥಲ.
ಇದು ವಾಣಿಜ್ಯತ್ವವೆಂಬ ವ್ಯಾಪಾರವಯ್ಯಾ.
ಮತ್ತೆ ಸ್ಥಲಸ್ಥಲಂಗಳಲ್ಲಿ ಅವಿರಳತ್ವದಿಂದೆ ಏಕೋತ್ತರಶತ ಸಕೀಲ
ಸರ್ವಕಲಾಭಿಜ್ಞತೆಯಾತ್ಮಕನಾಗಿ,
ಚಿದೇಂದ್ರಿ ಚಿತ್ಕರಣ ಚಿದ್ವಿಷಯಾನಂದಪ್ರಸಾದಕ್ಕೆ
ಸುಜ್ಞಾನದಿಂ ಕಾಮ್ಯಾಂಗನಾಗಿ ಜಂಗಮಲಿಂಗ
ಭೋಗೋಪಭೋಗಿಯಾಗಿಹುದೇ
ಶರಣ ಭಕ್ತನಾಚಾರವಯ್ಯ.
ತದ್ಭಾವಾತ್ಮಕನಾಗಿ ಆ ವೀರ ಲಿಂಗಜಂಗಮ
ಭೋಗೋಪಭೋಗಿಯಾಗಿಹುದೇ
ಪ್ರಸಾದಲಿಂಗ ಜಂಗಮಸ್ಥಲ.
ಇದು ಯಾಚಕತ್ವವೆಂಬ ವ್ಯಾಪಾರವಯ್ಯಾ.
ಸ್ಥಲಸ್ಥಲಂಗಳಲ್ಲಿ ಅಹಂಭಾವವಳಿದು ಸೋಹಂಭಾವವನುಳಿದು,
ದಾಸೋಹಂಭಾವಭರಿತನಾಗಿ ತನುಮನಧನದ
ಮಾಟ ನೋಟ ಕೂಟ ಶೂನ್ಯನಾಗಿ
ಘನಜಂಗಮಲಿಂಗಸನ್ನಿಹಿತ ಭೋಗೋಪಭೋಗಿಯಾಗಿಹುದೇ
ಐಕ್ಯಸ್ಥಲದಾಚಾರವಯ್ಯಾ.
ತದ್ಭಾವಪೂರ್ಣನಾಗಿ ಸರ್ವಶೂನ್ಯತ್ವದಿಂದೆ
ನಿರಾಮಯಲಿಂಗಜಂಗಮ ಭೋಗೋಪಭೋಗಿಯಾಗಿಹುದೇ
ಮಹಾಲಿಂಗಜಂಗಮಸ್ಥಲ.
ಇದು ಗೋಪಾಲತ್ವವೆಂಬ ವ್ಯಾಪಾರವಯ್ಯಾ.
ಈ ಭೇದವನರಿಯದೆ ಭಕ್ತನೆನಿಸಿ ವರ್ತಿಸುವ ಪ್ರಾಣಿ ಅನಾಚಾರಿ.
ಈ ಭೇದವನರಿಯದೆ ಕಾಯ ಕಂದಿಸಿ ಮನವ ಸಂಸಾರಕ್ಕಿಕ್ಕಿ
ಭಾವ ಭ್ರಾಂತಿಗೊಂಡು ಮಾಟಕೂಟವ ಹೊತ್ತು ತಿರುಗುವ ಪ್ರಾಣಿ ಅಜ್ಞಾನಿ.
ಈ ಉಭಯವನರಿಯದೆ ಸಂಬಂಧವನು ಅಸಂಬಂಧವ ಮಾಡಿ,
ಅಸಂಬಂಧವನು ಸಂಬಂಧವ ಮಾಡಿಕೊಟ್ಟು
ಹಿರಿಯನೆನಿಸುವವ ಮೂಢಪ್ರಾಣಿ.
ಇದು ಕಾರಣ ಈ ಅನಾಚಾರಿ ಅಜ್ಞಾನಿ
ಮೂಢ ಪ್ರಾಣಿಗಳ ನೋಡಿ ನಗುತಿರ್ದರು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರು.
Art
Manuscript
Music
Courtesy:
Transliteration
Bhaktanācāra jaṅgamaliṅgasannihita,Bhaktanācāra jaṅgamaliṅgasannihita,
jaṅgamadācāra liṅgajaṅgamasannihita,
ṣaṭkr̥ṣi satkāyakavē muktiya bīḍu,
bhaktaṅgādaru satkāyakavēbēku,
jaṅgamakkādarū satkāyakavēbēku.
Bhaktaṅgācaraṇe, jaṅgamakke sambandha.
Adentendoḍe, jñānōdayavāda mahātmanu
māyānivr̥ttiya māḍi
tanusambandha sadguru
sam'mukhōpāvasteyaneyidu kaṇḍu,
tanutrayavanittu dīkṣātrayānvitanāgi bandu
Sarvācārasampattu śōbhanalīleya naṭisuvalli
sthalasthalaṅgaḷa tāmasasuḷuhiṅge
sujñānaśāstravanu sucittadalli dharisi
sākāra sudravyaṅgaḷanu
nirvan̄cakatva trikaraṇa śud'dhātmakadinde
saguṇajaṅgamaliṅgasannihita
bhōgōpabhōgiyāgihudē
śrad'dhābhaktanācāravayyā.
Ā tadbhāvasamēta nijaliṅgajaṅgamasannihita
bhōgōpabhōgiyāgihudē ācāraliṅga jaṅgamada sthala.
Idu asiyemba vyāpāravayya.
Ācāraṅga, vicāra mana, samayācāra bhāvavemba
nirmalasukṣētraṅkanāgi
sāvadhānamukhasukhabhaktiyinde
sākārajaṅgamaliṅgasannihita bhōgōpabhōgiyāgihudē
sāvadhāna prasādibhaktanācāravayyā.
Tadbhāvabharitanāgi svayaṁ liṅgajaṅgamasannihitanāgihudē
śivaliṅgajaṅgamasthala.
Idu kr̥ṣiyemba vyāpāravayyā.
Matte sthalasthalaṅgaḷalli bhēdābhēda
sadvivēkamukha lēkhana sthāpya
nirmalaniṣṭāṅganāgi vīrajaṅgamaliṅgasannihita
Bhōgōpabhōgiyāgihudē niṣṭhāmahēśvara bhaktanasthala.
Antappa niṣṭhāṅgamantramūrtiyāgi
nijaliṅgajaṅgamabhōgōpabhōgiyāgihudē
guruliṅgajaṅgamasthala.
Idu masiyemba vyāpāravayyā.
Matte sthalasthalaṅgaḷalli daśavāyuvina dandugavanu
sujñānakriyāsambhāṣaṇeyallaḍagisi Aṣṭa kuśabda bāhyapraṇava paripūrṇanāgi
anubhāvabhaktiyinde, satyajaṅgamaliṅgasannihita
bhōgōpabhōgiyāgihudē prāṇaliṅgibhaktanasthala.
Tadbhāva paripūrṇanāgi anubhāva liṅgajaṅgama
bhōgōpabhōgiyāgihudē caraliṅga jaṅgamasthala.
Idu vāṇijyatvavemba vyāpāravayyā.
Matte sthalasthalaṅgaḷalli aviraḷatvadinde ēkōttaraśata sakīla
Sarvakalābhijñateyātmakanāgi,
cidēndri citkaraṇa cidviṣayānandaprasādakke
sujñānadiṁ kāmyāṅganāgi jaṅgamaliṅga
bhōgōpabhōgiyāgihudē
śaraṇa bhaktanācāravayya.
Tadbhāvātmakanāgi ā vīra liṅgajaṅgama
Bhōgōpabhōgiyāgihudē
prasādaliṅga jaṅgamasthala.
Idu yācakatvavemba vyāpāravayyā.
Sthalasthalaṅgaḷalli ahambhāvavaḷidu sōhambhāvavanuḷidu,
dāsōhambhāvabharitanāgi tanumanadhanada
māṭa nōṭa kūṭa śūn'yanāgi
Ghanajaṅgamaliṅgasannihita bhōgōpabhōgiyāgihudē
aikyasthaladācāravayyā.
Tadbhāvapūrṇanāgi sarvaśūn'yatvadinde
nirāmayaliṅgajaṅgama bhōgōpabhōgiyāgihudē
mahāliṅgajaṅgamasthala.
Idu gōpālatvavemba vyāpāravayyā. Ī bhēdavanariyade bhaktanenisi vartisuva prāṇi anācāri.
Ī bhēdavanariyade kāya kandisi manava sansārakkikki
bhāva bhrāntigoṇḍu māṭakūṭava hottu tiruguva prāṇi ajñāni.
Ī ubhayavanariyade sambandhavanu asambandhava māḍi,
Asambandhavanu sambandhava māḍikoṭṭu
hiriyanenisuvava mūḍhaprāṇi.
Idu kāraṇa ī anācāri ajñāni
mūḍha prāṇigaḷa nōḍi nagutirdaru kāṇā
guruniran̄jana cannabasavaliṅgā nim'ma śaraṇaru.
ಸ್ಥಲ -
ಭಕ್ತಿತಾಮಸ ನಿರಸನಸ್ಥಲದ
ಉಳಿದ ವಚನಗಳು