ಹಾರುವನ ಕೈಯಿಂದ
ಪಂಚಾಂಗವನರಿದು ವರ್ತಿಸಬಾರದು
ಸದಮಲಲಿಂಗಸಮೇತರು.
ಜಂಗಮದಮುಖದಿಂದ
ಪಂಚಾಂಗವನರಿದು ವರ್ತಿಸುವುದು
ಗುರುಕರಸಂಜಾತರು.
ಇದು ಕಾರಣ, ಎನಗೆ ಮದುವೆಯ
ಉತ್ಸಾಹಕಾರ್ಯ ಮುಂದಿಲ್ಲ;
ನಾನು ಹೋಗಿ ಹಾರುವನ ಕಂಡು ಬರಲಿಲ್ಲ.
ಮತ್ತೆ ಬರುವವರೆಲ್ಲ ಜಂಗಮದ ನುಡಿಯನರಿದು ಬನ್ನಿ,
ಎನಗೆ ಜಂಗಮವ ಕೇಳಲು ಮನವಿಲ್ಲ.
ಗುರುನಿರಂಜನ ಚನ್ನಬಸವಲಿಂಗವ
ಬಿಡಲುಬಾರದು ಕಾಣಾ.