ನಡೆದವರ ನುಡಿಯ ಕಲಿತು ತುಡುಗುಣಿ
ತಾನೊಂದು ಲಿಂಗವಹಿಡಿದು
ನಡೆವ ಮನಬಂದಂತೆ, ನುಡಿವ ಜಿಹ್ವೆ ಶುಷ್ಕವಹನ್ನಕ್ಕರ,
ಹಿಡಿವ ಕರಣೇಂದ್ರಿಯ ವಿಷಯದಿಚ್ಫೆಗೆ ಸೋಲ್ತು.
ಮತ್ತೆ ಗುರುಲಿಂಗಜಂಗಮವನಿದಿರಿಡದ ಪರಿಣಾಮಿಯೆಂದರೆ
ಆ ಬಾಯಲ್ಲಿ ಸುರಿಯವೆ ಬಾಲ್ಹುಳಗಳು?
ಈ ವಾಕ್ಪಟುಪ್ರಾಣಿಯನು ಬಿಟ್ಟು ಕಳೆವುದು
ಗುರುನಿರಂಜನ ಚನ್ನಬಸವಲಿಂಗದ ನವೀನ
ಚರಿತೆಯ ತೋರದೆ.
Art
Manuscript
Music
Courtesy:
Transliteration
Naḍedavara nuḍiya kalitu tuḍuguṇi
tānondu liṅgavahiḍidu
naḍeva manabandante, nuḍiva jihve śuṣkavahannakkara,
hiḍiva karaṇēndriya viṣayadicphege sōltu.
Matte guruliṅgajaṅgamavanidiriḍada pariṇāmiyendare
ā bāyalli suriyave bāl'huḷagaḷu?
Ī vākpaṭuprāṇiyanu biṭṭu kaḷevudu
guruniran̄jana cannabasavaliṅgada navīna
cariteya tōrade.
ಸ್ಥಲ -
ಮಹೇಶ್ವರಸ್ಥಲದ
ಉಳಿದ ವಚನಗಳು