Index   ವಚನ - 1015    Search  
 
ಸಂಸಾರಸಂಬಂಧಿಗೆ ಇಷ್ಟಲಿಂಗವೆಲ್ಲಿಹದೊ! ಪರಸ್ತ್ರೀಕಾಂಕ್ಷೆಭರಿತಗೆ ಪ್ರಾಣಲಿಂಗವೆಲ್ಲಿಹದೊ! ಅನ್ಯಸ್ಥಾವರಭಾವಸಂಬಂಧಿಗೆ ಭಾವಲಿಂಗವೆಲ್ಲಿಹದೊ! ಈಸುವನರಿದು ಮೋಸದೊಳಗಿರ್ದು ಮಹೇಶನಾಮವ ಕಾಣಿಸಿಕೊಂಡರೆ ಈಸುವನೇ ಕಡೆಮೊದಲರಿಯದೆ ಭವಸಾಗರವನು ಗುರುನಿರಂಜನ ಚನ್ನಬಸವಲಿಂಗ ನೀ ಸಾಕ್ಷಿಯಾಗಿ.