Index   ವಚನ - 1016    Search  
 
ಅಂಗನೆಯ ಸಂಗಮೋಹಿಗೆ ಗುರುನಿಷ್ಠೆಯಿಲ್ಲ, ಲಿಂಗನಿಷ್ಠೆಯಿಲ್ಲ, ಜಂಗಮನಿಷ್ಠೆಯಿಲ್ಲ, ಪಾದೋದಕಪ್ರಸಾದನಿಷ್ಠೆಯಿಲ್ಲ, ಈ ಪಂಚವಿಧ ಪ್ರಸನ್ನಸುಖವರಿಯದ ಮಲಸುಖಿಯು ತಾನೊಂದು ಕಾರ್ಯವರಿದುಬಂದು ಕಾರಣಿಕಪುರುಷನೆಂದರೆ ಈ ಹುಸಿ ಬಾಯಿಗೆ ಮುಂದೆ ಕಸಮಲ ಹುಡಿಯ ತುಂಬುವುದೇ ಸಾಕ್ಷಿ. ಇದು ಕಾರಣ, ಈ ಹುಸಿನಾಲಿಗೆಯನು ಇದರ ಚೇತನವನು ಅದರಾಸ್ವಾದವನು ಸುಟ್ಟು ಬಟ್ಟಿಟ್ಟಲ್ಲದೆ ಭಕ್ತಾದಿಕುಳವೆಂದರೆ ಅಘೋರನರಕ ತಪ್ಪದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.