Index   ವಚನ - 1024    Search  
 
ತಾಮಸಗೊಂಡು ತಾಪತ್ರಯದಲ್ಲಿ ಬೆಂದು ಹುಸಿರೂಹಿನಲ್ಲಿ ಹೊಡೆದಾಡುತಿರ್ದ ಪ್ರಾಣಿಗಳು ಮೃಡನಂಗಗೊಂಡಮಹಿಮರ ಘನತೆಯ ನೋಡಿ ಕೇಳಿ ತಾವಾದೆವೆಂಬ ತರಳನುಡಿ ಮನಗೊಂಡು ಗುರುವೆಂದು ಲಿಂಗವೆಂದು ಜಂಗಮವೆಂದು ಪಾದೋದಕಪ್ರಸಾದವೆಂದು ಪಂಚಾಚಾರ ಪ್ರಮಾಣವಿಡಿದು ವಂಚನೆವೈದಿ ಸಂಚಿತಪ್ರಾಪ್ತಿಯನರಿದು ಆಗಾಮಿಯಿಂದೆ ಅಂತಕನಾಳಿನ ಕೈವಶ ಕಡೆಗಾಣದಿಪ್ಪರಿಗೆ ಜಾಣಪದವೆಲ್ಲಿಹದೊ ಗುರುನಿರಂಜನ ಚನ್ನಬಸವಲಿಂಗಾ!