Index   ವಚನ - 1026    Search  
 
ನೋಟಕ್ಕೆ ನಿಲುಕದ ಮಾಟಕ್ಕೆ ಸಮನಿಸದ ಕೂಟಕ್ಕೆ ಕಾಣಿಸದ ಸಾಕ್ಷಿಸಭೆಗಳರಿಯದ ನಿರವಯ ಬ್ರಹ್ಮವನು ಕರ ಮನ ಭಾವದಲ್ಲಿ ತರಹರಮಾಡಲಾರಳವಲ್ಲ ನೋಡಾ, ಮಹಾಘನ ಮಹಾಮಹಿಮರಿಗಲ್ಲದೆ. ಭಾವ ಬತ್ತಲೆಯಾಗಿ ಪ್ರಾಣನ ಗೊತ್ತುತಪ್ಪಿ, ಮನದ ಕತ್ತಲೆ ಹರಿದು ತನು ನಿರ್ಮಲವಾಗಿ ನಡೆ ನುಡಿ ಶುದ್ಧವಾದ ಸುಪ್ರಭಾನಿಲವಿಂಗೆ ಸ್ವಯವಾಗಿಪ್ಪ ನೋಡಾ ನಮ್ಮ ಗುರುನಿರಂಜನ ಚನ್ನಬಸವಲಿಂಗವು.