Index   ವಚನ - 1028    Search  
 
ಶ್ವಾನ ಬೊಗಳುವುದೇ ಸುಳುಹುಕಾಣದೆ? ಅಳಿದುಳಿದು ಗುರುವಿನಿಂದುದಿಸಿಬಂದೆವೆಂದು ನುಡಿದು ಬಂದ ಬಳಿಕ ನುಡಿನಡೆಯೊಳೊಪ್ಪಿ ಕಾಣಿಸಿಕೊಳ್ಳಬೇಕಲ್ಲದೆ ತಮದ ಮರೆಯಲ್ಲಿ ಮಡುಗಿ ಇತರರ ಗುಣವನರಸಿ ತಂದು ಆಡುವರು. ಅದಲ್ಲದೆ ಕಾಣದೆ ಕಂಡೆವೆಂದು ಹುಸಿ ನೇವರಿಸಿ ನುಡಿವ ಕಸಮೂಳರ ಕೆಡಹಿ ಬಸುರಲ್ಲಿ ಮಲವ ತುಂಬುವರು ಕಾಲನವರು. ಈ ಶ್ವಾನನ ಬೊಗಳಿಕೆಗೆ ಕಡೆಯಾದ ಕರ್ಮಿಗಳ ನೆನೆಯಲಾಗದು ಕಾಲತ್ರಯದಲ್ಲಿ ಕಂಡ ಮಹಿಮರು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.