Index   ವಚನ - 1046    Search  
 
ಶರಣ ತನ್ನ ಮುಂದಣಾಚಾರಕ್ಕೆ ಹಿಂದಣ ಸಂದಣಿಯ ನೇವರಿಸಿ ತಂದು, ಗಂಭೀರಗತಿಮತಿಯೊಳ್ವೆರಸಿ, ಅತಿ ರಹಸ್ಯದನುವಿನೊಳೆರಕವಾದ, ನಿರುಪಮ ನಿಜಾನಂದದ ನಿಲುವಿಗೆ ಆನು ಆನಂದದನುಕೂಲದವಸರಕ್ಕಡಿಯಿಡಲೆಡೆಯುಂಟೆ? ಮಡದಿ ಪುರುಷರ ಮಾತು ಮಥನ ಘಾತದೊಳಗಿಲ್ಲದಿರ್ದನು, ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ ಅನುಪಮ ಚಾರಿತ್ರನು.