Index   ವಚನ - 1061    Search  
 
ಬಾಲಯವ್ವನವೃದ್ಧಶೂನ್ಯ ಶರಣಂಗೆ ಜನನ ಸ್ಥಿತಿ ಲಯವೆಂಬುದೇನು ಹೇಳಾ! ಗಳಿಸಲಿಲ್ಲದ ಹಾಕದ ಕಳೆಯಲಿಲ್ಲದ ಅಸಲುಮುಳುಗಿದ ಮತ್ತೆ ಬಡ್ಡಿಯ ಬರೆಯಲುಂಟೆ. ಲೀಲೆಯಾದರೆ ಲೋಲ ಗುರುನಿರಂಜನ ಚನ್ನಬಸವಲಿಂಗಾ.