Index   ವಚನ - 1067    Search  
 
ಆದಿಯ ಕುಳವನು ಆದಿ ಅನಾದಿಯಿಂದರಿದು, ನಾದಸ್ವರೂಪವಾಗಿ ತೋರಬಲ್ಲರೆ ಶರಣ ಕಾಣಾ. ಅನಾದಿಯ ಕುಳವನು ಆದಿ ಅನಾದಿಯಿಂದರಿದು, ಬಿಂದುಸ್ವರೂಪವಾಗಿ ತೋರಬಲ್ಲರೆ ಶರಣ ಕಾಣಾ. ಅತೀತ ಕುಳವನು ಆದಿ ಅನಾದಿಯಿಂದರಿದು, ಕಳಾಸ್ವರೂಪವಾಗಿ ತೋರಬಲ್ಲರೆ ಶರಣ ಕಾಣಾ. ಇಂತು ಆದಿ ಅನಾದಿಯಿಂದೆ ಆದಿಯನರಿದು ಅನಾದಿ ಗುರುನಿರಂಜನ ಚನ್ನಬಸವಲಿಂಗವಾದಾತನೇ ಶರಣ ಕಾಣಾ.