ಶಿವಯೋಗಿಯ ಯೋಗವನಾರು ಬಲ್ಲರು ಹೇಳಾ.
ಖೇಚರಿಯನರಿದು, ಷಣ್ಮುಖಿಯಲ್ಲಿ ಆಚರಿಸಿ, ಶಾಂಭವಿಯೊಳಿರ್ಪ
ನಿರ್ಮಲಾನಂದ ನಿಜವೀರಶೈವನನಾರು ಬಲ್ಲರು ಹೇಳಾ!
ಅಷ್ಟಾಂಗಯೋಗದಲ್ಲಿ ಶ್ರೇಷ್ಠಾಭಿಮಾನಿಗಳಾದ
ನಿಜನಿಷ್ಠೆಮಹಿಮರ ಘನವನಾರು ಬಲ್ಲರು ಹೇಳಾ!
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಶರಣನ ಪರಿಯ ನೀವೇ ಬಲ್ಲಿರಿ.
Art
Manuscript
Music
Courtesy:
Transliteration
Śivayōgiya yōgavanāru ballaru hēḷā.
Khēcariyanaridu, ṣaṇmukhiyalli ācarisi, śāmbhaviyoḷirpa
nirmalānanda nijavīraśaivananāru ballaru hēḷā!
Aṣṭāṅgayōgadalli śrēṣṭhābhimānigaḷāda
nijaniṣṭhemahimara ghanavanāru ballaru hēḷā!
Guruniran̄jana cannabasavaliṅgā
nim'ma śaraṇana pariya nīvē balliri.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು