ಅರಿಯದೆ ಆಗಿ ಬಂದವರೆನಲಾಗದು,
ಆದವರಿಗೆ ಮನಬಾಧೆಯುಂಟೆ?
ಅದೇಕೆಂದಡೆ, ಶರಣುಹಾಕಿ ಬಂದಲ್ಲಿ
ನಿರ್ಮಳ ಮಾತನಾಡುವರು.
ಹಾಕದೆ ಬಂದು ಮಾತನಿಟ್ಟರೆ
ಪೂರ್ವದ ಹಗೆಭಾವದುಲುವ ತೋರುವರು.
ಕೊಡಲಿಲ್ಲ ಕೊಳ್ಳಲಿಲ್ಲ ತುಡುಗುಣಿತನದ ಬಡಿವಾರವ ನೋಡಾ.
ಇಂತಲ್ಲ ಶರಣ, ಲೋಕರವಿಯಂತಿಪ್ಪ
ಗುರುನಿರಂಜನ ಚನ್ನಬಸವಲಿಂಗಾ ನೀ ಸನ್ನಿಹಿತ.
Art
Manuscript
Music
Courtesy:
Transliteration
Ariyade āgi bandavarenalāgadu,
ādavarige manabādheyuṇṭe?
Adēkendaḍe, śaraṇuhāki bandalli
nirmaḷa mātanāḍuvaru.
Hākade bandu mātaniṭṭare
pūrvada hagebhāvaduluva tōruvaru.
Koḍalilla koḷḷalilla tuḍuguṇitanada baḍivārava nōḍā.
Intalla śaraṇa, lōkaraviyantippa
guruniran̄jana cannabasavaliṅgā nī sannihita.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು