Index   ವಚನ - 1102    Search  
 
ವಾಚಕ ಮಾನಸ ಕಾಯಕಶುದ್ಧವಾದುದೇ ಜಂಗಮಸ್ಥಲವು. ಕಾಯಕ್ಕುಪಚಾರ, ವಾಚಕ್ಕೆ ನವೀನಭಾವ, ಮನಕ್ಕೆ ಸಂತೋಷವ ಕೊಡಬಲ್ಲರೆ ಭಕ್ತ. ಈ ಉಭಯದಲೊದಗಿದ ಪಾದೋದಕ ಪ್ರಸಾದ ಅದು ತಾನೆ ಗುರುನಿರಂಜನ ಚನ್ನಬಸವಲಿಂಗ ಬೇರಿಲ್ಲ.