ನಕಾರದೊಳಗೆ ಓಂಕಾರವ ಕಂಡೆ,
ಮಕಾರದೊಳಗೆ ಓಂಕಾರವ ಕಂಡೆ,
ಶಿಕಾರದೊಳಗೆ ಓಂಕಾರವ ಕಂಡೆ,
ವಕಾರದೊಳಗೆ ಓಂಕಾರವ ಕಂಡೆ,
ಯಕಾರದೊಳಗೆ ಓಂಕಾರವ ಕಂಡೆ.
ಓಂಕಾರದೊಳಗೆ ಪಂಚಾಕ್ಷರವ ಕಂಡು,
ನಮೋ ನಮೋ ಎನುತಿರ್ದೆ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮೊಳಗೆ ನೀವೆಯಾಗಿ.
Art
Manuscript
Music
Courtesy:
Transliteration
Nakāradoḷage ōṅkārava kaṇḍe,
makāradoḷage ōṅkārava kaṇḍe,
śikāradoḷage ōṅkārava kaṇḍe,
vakāradoḷage ōṅkārava kaṇḍe,
yakāradoḷage ōṅkārava kaṇḍe.
Ōṅkāradoḷage pan̄cākṣarava kaṇḍu,
namō namō enutirde kāṇā
guruniran̄jana cannabasavaliṅgā
nim'moḷage nīveyāgi.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು