Index   ವಚನ - 1135    Search  
 
ಲೋಕದೊಳಗಿನ ಲೌಕಿಕವ ಕಂಡು ನೋಡಿ ನಿರಾಕಾರವನು ಸಾಕಾರದ ಕೈಯಿಂದ ಕೊಂಡು, ಸಂಪದಲೋಲ ಸಗುಣ ನಿರ್ಗುಣಯಾತ್ರಿಯ ಘನವ ನೋಡಾ! ಘನವ ಮನ ವೇದಿಸಿ ಗಂಭೀರವಗತನದಾಗುವಾಗಿ ಆಗಿನ ಸೌಭಾಗ್ಯ ತಾನಾಗಿ ನಿಂದ ಗುರುನಿರಂಜನ ಚನ್ನಬಸವಲಿಂಗವು ಶರಣ.