Index   ವಚನ - 1149    Search  
 
ಕರ್ಕಸನ ಮಗಳು ಅರ್ಕಜನ ಮದುವೆಯ ಮಡದಿಯಾಗಿ ತನ್ನ ಲಕ್ಷಕೋಟಿ ಮಕ್ಕಳ ಮುದ್ದಾಡಿಸುವಲ್ಲಿ ನೋಡಬಂದವರ ಕೂಡಿ ಕ್ರೀಡಿಸುವಳು. ಇದನರಿದ ಕುಲಗೇಡಿ ಭಂಗಹೀನ ಬಯಲ ಭ್ರಾಂತರು ಕರ್ಕಸನ ಅರ್ಕನೊಡಲೊಳಗಿಕ್ಕಿ ಆಡುತಾಡುತ ಅರತುನಿಂದರು ಗುರುನಿರಂಜನ ಚನ್ನಬಸವಲಿಂಗವಾಗಿ.