Index   ವಚನ - 1152    Search  
 
ಕ್ರಿಯಾನುಭಾವಿಗಳು ಮುಗ್ಧರಲ್ಲ, ಜ್ಞಾನಾನುಭಾವಿಗಳು ಮುಗ್ಧರಲ್ಲ, ತತ್ವಾನುಭಾವಿಗಳು ಮುಗ್ಧರಲ್ಲ, ಶಿವಾನುಭಾವಿಗಳು ಮುಗ್ಧರಲ್ಲ, ಪರಮಾನುಭಾವಿಗಳು ಮುಗ್ಧರಲ್ಲ, ಮಹಾನುಭಾವಿಗಳು ಮುಗ್ಧರಲ್ಲ, ಮತ್ತಾರು ಮುಗ್ಧರೆಂದಡೆ ಮುಕ್ತಾಯಕ್ಕನಣ್ಣ ಆರೂಢನಜಗಣ್ಣ ಮುಗ್ಧ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.