Index   ವಚನ - 1170    Search  
 
ಕುರುಹಿಲ್ಲದ ತೆರಹಿಲ್ಲದ ಮರಹಿಲ್ಲದ ಮರಹಿನಿಂದೊಪ್ಪುವ ನಿಲುವಿಂಗೆ ಈ ತೆರನಾಗಿ ಹೆಸರನರುಹಿಸಿ ಕಾಣಿಸಿಕೊಂಬ ಸಮಸ್ತವಸ್ತುಗಳೆಲ್ಲ ಅನ್ಯೋನ್ಯವಾಗಿಪ್ಪವಲ್ಲದೆ ತಾವುವೊಂದಾಗಿ ತೋರಿಕೆ ಕಾಣಿಸದು ನೋಡಾ. ಅದೇನು ಕಾರಣವೆಂದರೆ, ತಾನು ತನ್ನ ವಿನೋದಕ್ಕೆ ಶರಣಲಿಂಗಪದಾರ್ಥವೆಂದು ತೋರಿದ ತೋರಿಕೆಯಲ್ಲದೆ ಮತ್ತೇನು ಇಲ್ಲ ಕಾಣಾ. ಬಳಿಕ ಗುರುನಿರಂಜನ ಚನ್ನಬಸವಲಿಂಗ ತಾನೇ ಕಾಣಾ.