ಯೋನಿಯಲ್ಲಿ ಜನಿಸಿದ ಭಾವ ಸಂಸಾರದಲ್ಲಿ ತೊಳಲುವುದೇ ಸಾಕ್ಷಿ.
ಸಂಸಾರದಲ್ಲಿ ತೊಳಲುವ ಭಾವ ಮುಂದೆ
ಮರಣಬಾಧೆಯಲ್ಲಿ ಮುಳುಗುವುದೇ ಸಾಕ್ಷಿ.
ಅದಲ್ಲದೆ ಗುರುವಿನಲ್ಲಿ ಜನಿಸಿದ ಭಾವ ಸರ್ವಾಚಾರ ಸಂಪತ್ತಿನೊಳಗೆ
ಭೋಗೋಪಭೋಗಿಯಾಗಿಹುದೇ ಸಾಕ್ಷಿ.
ಸರ್ವಾಚಾರಸಂಪತ್ತಿನೊಳಗೆ ಭೋಗೋಪಭೋಗಿಯಾಗಿರ್ದ ಭಾವ
ಮಹಾಲಿಂಗೈಕ್ಯಪದಲೋಲವಾದುದೇ ಸಾಕ್ಷಿ.
ಇದು ಕಾರಣ ಆ ಭಾವಕ್ಕೆ ಸಂದುಸಂಶಯದ ಗೊಂದಣವುಂಟಲ್ಲದೆ
ಈ ಭಾವಕ್ಕೆ ಸಂದುಸಂಶಯದ ಗೊಂದಣವುಂಟೆ?
ಇದೇ ಗುರುನಿರಂಜನ ಚನ್ನಬಸವಲಿಂಗ
ತಾನಾದ ಶರಣಸದ್ಭಾವ.
Art
Manuscript
Music
Courtesy:
Transliteration
Yōniyalli janisida bhāva sansāradalli toḷaluvudē sākṣi.
Sansāradalli toḷaluva bhāva munde
maraṇabādheyalli muḷuguvudē sākṣi.
Adallade guruvinalli janisida bhāva sarvācāra sampattinoḷage
bhōgōpabhōgiyāgihudē sākṣi.
Sarvācārasampattinoḷage bhōgōpabhōgiyāgirda bhāva
mahāliṅgaikyapadalōlavādudē sākṣi.
Idu kāraṇa ā bhāvakke sandusanśayada gondaṇavuṇṭallade
ī bhāvakke sandusanśayada gondaṇavuṇṭe?
Idē guruniran̄jana cannabasavaliṅga
tānāda śaraṇasadbhāva.