Index   ವಚನ - 1181    Search  
 
ಕುರುಹಿಲ್ಲದೆ ಸಿರಿಸಂಪದ ಸಿಕ್ಕದೆಂದು ಕುರುಹನೊಡ್ಡಿದನೊಬ್ಬ ಜಾಣ. ಆ ಕುರುಹಿನ ಕೂಟದಿಂದೆ, ಕರಿದು ಬಿಳಿದೆಂಬ ಕರ್ಮಹಾಸಿಕೆಯಾಗಿ, ಭಕ್ತಭೋಗ ನಿದ್ರೆಯಾದಿ ಸಾಕಾರ ನಿರಾಕಾರಸಂಭ್ರಮ ಸಂದಣಿಸಿತ್ತು. ಇದನರಿದು ನೋಡುವ ಕಣ್ಣಿನವರ ಕಾಣುತ್ತ ಕಣ್ಣಿಲ್ಲದವರ ಕೈಯ ಪಿಡಿದು, ಕಾಣ ಕಾಣಬಾರದ ಕಂಡು, ಕಂಡು ಕಾಮಿತಸುಖಿಯಾಗಿ ನಿಃಕಾಮಿ ಗುರುನಿರಂಜನ ಚನ್ನಬಸವಲಿಂಗ ತಾನೆ ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯ ಪ್ರಾಣಚೈತನ್ಯ.