ದಿವಾಕರನ ದಿನಕರ್ಮದೊಳಗೆ ನಿಮಿಷಾರ್ಧ ಲಘುಜಡತ್ವವಿಲ್ಲದೆ
ಕಾರ್ಯನಾಗಿ ಕಾರಣಾನುಕೂಲಿಯಾದಂತೆ,
ನಿಶಾಕರನು ಮಾಸದ್ವಂದ್ವಕರ್ಮಾದಿ
ರಾಹುಬಾಧೆಯೊಳು ಲಘುಜಡತ್ವವಿಲ್ಲದೆ
ಕಾರ್ಯನಾಗಿ ಕಾರಣಾನುಕೂಲಿಯಾದಂತೆ,
ಅಂತಕ್ ಜ್ಞಾನ ಬಾಹ್ಯ ಶಾಂತಾನ್ವಿತ ಶರಣನು
ತನ್ನ ನಿತ್ಯ ಜ್ಞಾನ ಕ್ರಿಯಾವರ್ತನದೊಳಗೆ
ಗುರುಲಿಂಗಜಂಗಮ ಭಕ್ತಿ ವಿಭವ ವಿನಯವೆಂಬ ವಿಮಲತ್ವವನು
ಜರೆಮರಣಾದಿ ದ್ವಂದ್ವಕರ್ಮ ಮಾಯಾ ಶಂಕಾ ವಿಷಮಬಾಧೆಯನೊಗೆದು
ಲಘುಜಡತ್ವವಿಲ್ಲದೆ ಕಾರ್ಯನಾಗಿ ಕಾರಣಾನುಕೂಲಿಯಾಗಿ ಮೆರೆವ
ಮಹಿಮಾತಿಶಯವನುಳ್ಳ ಭಕ್ತನೆ ಸಾಕ್ಷಾತನೆಂಬೆ.
ಚೆಲುವಾತ್ಮಾಂಗ ಪ್ರಾಣಾತ್ಮಪ್ರಿಯ
ಸಿದ್ಧಲಿಂಗನಲ್ಲದೆ ಬೇರಿಲ್ಲ ಕಾಣಾ.
Art
Manuscript
Music
Courtesy:
Transliteration
Divākarana dinakarmadoḷage nimiṣārdha laghujaḍatvavillade
kāryanāgi kāraṇānukūliyādante,
niśākaranu māsadvandvakarmādi
rāhubādheyoḷu laghujaḍatvavillade
kāryanāgi kāraṇānukūliyādante,
antak jñāna bāhya śāntānvita śaraṇanu Tanna nitya jñāna kriyāvartanadoḷage
guruliṅgajaṅgama bhakti vibhava vinayavemba vimalatvavanu
jaremaraṇādi dvandvakarma māyā śaṅkā viṣamabādheyanogedu
laghujaḍatvavillade kāryanāgi kāraṇānukūliyāgi mereva
mahimātiśayavanuḷḷa bhaktane sākṣātanembe.
Celuvātmāṅga prāṇātmapriya
sid'dhaliṅganallade bērilla kāṇā.
ಸ್ಥಲ -
ಗೌರವಾಂಗಸ್ಥಲದ ವಚನಗಳು