Index   ವಚನ - 1215    Search  
 
ಮಲತ್ರಯದ ಮೋಹವನು ಹರಿವುದು, ತನುತ್ರಯದ ಮದವ ತೊರೆವುದು, ಈಷಣತ್ರಯದ ಪ್ರೇಮವ ಜರಿವುದು, ಜೀವನತ್ರಯದ ಜಡತ್ವ ಕಳೆವುದು, ಅವಸ್ಥಾತ್ರಯದನುವ ಮರೆವುದು ಭವಭಾರಿಗಳಿಗೆ ಸಾಮಾನ್ಯವೆ ಚನ್ನ ಗುರುಲಿಂಗಜಂಗಮಪ್ರಭುವೆ ನಿಮ್ಮ ಸದ್ಭಕ್ತರಿಗಲ್ಲದೆ?