Index   ವಚನ - 3    Search  
 
ಅಷ್ಟದಳಕಮಲದಲ್ಲಿ ಚರಿಸುವ ಆತ್ಮನ ಗತಿಭೇದವನರಿದು, ಪ್ರಾಣಲಿಂಗಸಂಬಂಧಿಯಾಗಿ ಲಿಂಗಾರ್ಚನೆಯ ಮಾಡುವ ಪರಿ ಎಂತೆಂದೆಡೆ: ಪೂರ್ವದಳದಲ್ಲಿ ಭಕ್ತನಾಗಿಹ, ಅಗ್ನೆದಳದಲ್ಲಿ ಷಡ್ರಸಾಪೇಕ್ಷಿತನಾಗಿಹ ಯಮದಳದಲ್ಲಿ ಕ್ರೋಧಿಯಾಗಿಹ, ನೈರುತ್ಯದಳದಲ್ಲಿ ಸತ್ಯನಾಗಿ ಸದಾಚಾರ ವರ್ತನೆಯಲ್ಲಿಹ, ವರುಣದಳದಲ್ಲಿ ಪರವಶನಾಗಿಹ, ವಾಯುವ್ಯದಳದಲ್ಲಿ ಗಮನಿಯಾಗಿಹ ಉತ್ತರದಳದಲ್ಲಿ ಧರ್ಮಶೀಲನಾಗಿಹ, ಈಶಾನ್ಯದಳದಲ್ಲಿ ಮುಕ್ತಿಯ ನಿಶ್ಚೈಸಿ ಧ್ಯಾನ ಧಾರಣ ಸಮಾದಿಯೆಂಬ ಸತ್ಕರ್ಮವಿಷಯಿಯಾಗಿಹ ಇಂತೀ ಅಷ್ಟದಳಂಗಳಂ ಮೀರಿ ನಿಜಸ್ಥಾನದಲ್ಲಿ ನಿಂದಾಗ ಸಚ್ಚಿದಾನಂದ ಸ್ವರೂಪನಾಗಿ ಚಲನೆಯಿಲ್ಲದಿಹ ಅಂದಂತೆಂದಡೆ: ಪೂರ್ವದಳೇ ಭವೇದ್ಭಕ್ತಾ ಅಗ್ನಶ್ಚುಕ್ಷುದಮೇವ ಚ | ದಕ್ಷಿಣಂ ಕ್ರೋಧಮುತ್ಪನ್ನಂ ನೈರುತ್ಯಂ ಸತ್ಯಮೇವ ಚ || ಪಶ್ಚಿಮಂತು ಭವೇನಿದ್ರಾ ವಾಯವ್ಯಂ ಗಮನಂ ಸ್ತಥಾ| ಉತ್ತರಂ ಧರ್ಮಶೀಲಾಯ ಈಶಾನ್ಯಂ ವಿಷಯಂ ಸ್ತಥಾ| ಅಷ್ಟಕರ್ನಿಕೇ ಮಧ್ಯಸ್ಥಂ ಆನಂದಮಾಚಲಂ ಶಿವಃ | ಪರಾನಂದಾತ್ಮಕಂ ಸೂಕ್ಷಂ ಕೇವಲ ಸನ್ನಿರಂಜನ | ಜ್ಞಾನಾಶ್ರಿತ ಪರಂ ಲಿಂಗಂ ಯೋಗಿನಾಂ ಹೃದಯೇಸ್ಥಿತಂ | ಯದೇವಬಿಂಬಿಂ ಹೃದಯಾವಲಿಪ್ತಂ | ತೇಜೋಮಯಭ್ರಾಜಯತೇ ಸುಧಾಂತಂ | ತದಾತ್ಮತ್ವಂ ಪ್ರಸಮಿಕ್ಷ್ಯದೇಹೀ| ಏಕಃ ಕೃತಾರ್ಥೋ ಭವತೇ ವಿಶೋಕಃ || ಆತ್ಮಾತ್ವಂ ಗಿರಿಜಾಮತಿಃ ಪರಿಚರಾಃ ಪ್ರಾಣಃ ಶರೀರಂ ಗೃಹಂ | ಪೂಜಾತೇ ವಿಷಯೋಪಭೋಗರಚನಾ ನಿದ್ರಾಸಮ್ಯಕ್ಸಮಾಧಿಸ್ಥಿತಿಃ|| ಸಂಚಾರಃ ಪದಯೋಃ ಪ್ ಪ್ರದಕ್ಷಣವಿಧಿಃ ಸ್ತೋತ್ರಾಣಿ ಸರ್ವಾಗಿರಃ | ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಂ || ಯಥಾಪ್ರಾಸ್ಯ ಲಿಂಗಸ್ಯ ಸಂಯೋಗೋ ವಿಧಿತತ್ಪರಂ. ತಥೈವ ಶರಣಂ ಸಾಕ್ಷಾಧ್ಭವತ್ಯೇವಂ ನ ಸಂಶಯಃ || ಇಂತೆದುದಾಗಿ, ಪ್ರಾಣದ ಲಿಂಗದ ಸಂಗದ ಸಮರಸದರಿವರತು ನಿಂದ ನಿಲುವನಿಪಮಿಸಬಾರದು. ಅದೆಂತೆಂದಡೆ: ‘ಯತೋ ವಾಚೋ ನಿವರ್ತಂತೇ ಆಪ್ರಾಪ್ಯಮನಸಾ ಸಃ’ ಎಂದುದು ಶ್ರುತಿ, ಪರಮಗುರುವೆ ನಂಜುಂಡಶಿವಾ.