ಗುರುಲಿಂಗಭಕ್ತನಾದರೆ ಪಾಶತ್ರಯ ವಿರಹಿತನಾಗಿರಬೇಕು.
ಗುರುಲಿಂಗನಿಷ್ಠನಾದರೆ ಅನ್ಯಭಜನೆಯಿಲ್ಲದಿರಬೇಕು.
ಗುರುಲಿಂಗಪ್ರಸಾದಿಯಾದರೆ ಅನ್ಯರಲ್ಲಿ ಕೈಯಾನದಿರಬೇಕು.
ಗುರುಲಿಂಗಪ್ರಾಣಿಯಾದರೆ ಅರ್ಪಿಸಿದಲ್ಲದ ಕೊಳ್ಳದಿರಬೇಕು.
ಗುರುಲಿಂಗಸಮರಸನಾದರೆ ಅನ್ಯರಿಗೆರಗದಿರಬೇಕು.
ಗುರುಲಿಂಗಶರಣನಾದರೆ ಇಹಪರವೆಂಬ ಇದ್ದೆಸೆಗಡಬೇಕು.
ಇಂತು ಷಟ್ ಸ್ಥಲವಿಡಿದಾಚರಿಸಿ ಗುರುಲಿಂಗದಲ್ಲಿ ಎರಡಳಿದುಳಿದ
ನಿಜಜ್ಞಾನಿ ತಾನೆ. ನಮ್ಮ ಪರಮಗುರು ನಂಜುಂಡಶಿವನು.
Art
Manuscript
Music
Courtesy:
Transliteration
Guruliṅgabhaktanādare pāśatraya virahitanāgirabēku.
Guruliṅganiṣṭhanādare an'yabhajaneyilladirabēku.
Guruliṅgaprasādiyādare an'yaralli kaiyānadirabēku.
Guruliṅgaprāṇiyādare arpisidallada koḷḷadirabēku.
Guruliṅgasamarasanādare an'yarigeragadirabēku.
Guruliṅgaśaraṇanādare ihaparavemba iddesegaḍabēku.
Intu ṣaṭ sthalaviḍidācarisi guruliṅgadalli eraḍaḷiduḷida
nijajñāni tāne. Nam'ma paramaguru nan̄juṇḍaśivanu.