ಜಂಗಮ ಜಂಗಮವೆಂಬ ನುಡಿಗೆ ನಾಚರು ನೋಡಯ್ಯ.
ಜಂಗಮ ಮಲತ್ರಯ ಈಷಣತ್ರಯ ಪಾಶತ್ರಯ ತನುತ್ರಯ
ಜೀವತ್ರಯ ಅವಸ್ಥಾತ್ರಯ ಗುಣತ್ರಯವಿರಹಿತ ನೋಡಯ್ಯ.
ಜಂಗಮ ಧರ್ಮಾರ್ಥಕಾಮಮೋಕ್ಷ ಸಾಲೋಕ್ಯ ಸಾಮೀಪ್ಯ
ಸಾರೋಪ್ಯ ಸಾಯುಜ್ಯವೆಂಬ ಜಡಕರ್ಮವಿರಹಿತ ನೋಡಯ್ಯ.
ಜಂಗಮ ಜನನಮರಣವಿರಹಿತನಂದೆಂತೆಂದಡೆ:
ಜಕಾರಂ ಜನನಂ ದೂರಂ ಗಕಾರಂ ಗಮನವರ್ಜಿತಃ |
ಮಕಾರಂ ಮರಣಂ ನಾಸ್ತಿತ್ರಿವರ್ಣಮಭಿಧೀಯತೇ ||
ಆದ್ಯಂತರಹಿತಂ ಶೂನ್ಯಂ ಸರ್ವಾನಂದಮಯಂ ವಿಭುಃ|
ಅನಾದಿ ಜಂಗಮೋ ದೇವಿ ಬ್ರಹ್ಮವಿಷ್ಣ್ವೇಂದ್ರ ಪೂಜಿತಃ||
ಲೋಷ್ಠಹೇಮ ಸಮಾನಶ್ಚಯೋ ಹಿತಾಹಿತಯೋ ಸಮಃ|
ಸಂತುಷ್ಟಶ್ಚಾಪಮಾನೇಷು ಸ್ವತತ್ರಂ ಜಂಗಮಸ್ಥಲಂ ||
ಎಂದುದಾಗಿ, ಆದ್ಯಂತರಹಿತ ಸ್ವತಂತ್ರ ಘನಮಹಿಮ ನೋಡಯ್ಯ.
ಜಂಗಮ ಸಚ್ಚಿದಾನಂದ ನಿತ್ಯಪರಿಪೂರ್ಣ.
ಇಂತಪ್ಪ ಜಂಗಮದ ನಿಲುವಿಗೆ ನಮೋ ನಮೋ ಎಂಬೆ ಕಾಣಾ.
ಪರಮಗುರುವೆ ನಂಜುಂಡಶಿವಾ.
Art
Manuscript
Music
Courtesy:
Transliteration
Jaṅgama jaṅgamavemba nuḍige nācaru nōḍayya.
Jaṅgama malatraya īṣaṇatraya pāśatraya tanutraya
jīvatraya avasthātraya guṇatrayavirahita nōḍayya.
Jaṅgama dharmārthakāmamōkṣa sālōkya sāmīpya
sārōpya sāyujyavemba jaḍakarmavirahita nōḍayya.
Jaṅgama jananamaraṇavirahitanandentendaḍe:
Jakāraṁ jananaṁ dūraṁ gakāraṁ gamanavarjitaḥ |
makāraṁ maraṇaṁ nāstitrivarṇamabhidhīyatē ||
ādyantarahitaṁ śūn'yaṁ sarvānandamayaṁ vibhuḥ|
Anādi jaṅgamō dēvi brahmaviṣṇvēndra pūjitaḥ||
lōṣṭhahēma samānaścayō hitāhitayō samaḥ|
santuṣṭaścāpamānēṣu svatatraṁ jaṅgamasthalaṁ ||
endudāgi, ādyantarahita svatantra ghanamahima nōḍayya.
Jaṅgama saccidānanda nityaparipūrṇa.
Intappa jaṅgamada niluvige namō namō embe kāṇā.
Paramaguruve nan̄juṇḍaśivā.