Index   ವಚನ - 15    Search  
 
ತಾನೆಂಬ ತೋರಿಕೆ ತನಗಿಲ್ಲವಾಗಿ, ತನ್ನಿಂ ತೋರುವ ವಿಶ್ವಪ್ರಪಂಚವೇನೊ ಇಲ್ಲದ ನಿರ್ವಾಚ್ಯವಾಗಿರ್ದ ಪರಬ್ರಹ್ಮವು, ತನ್ನ ಲೀಲೆಯಿಂ ತಾನೆಯಖಂಡಗೋಳಕಾಕಾರಮಪ್ಪ ಸ್ವಯಂಭುಲಿಂಗವಾಯಿತ್ತು. ಆ ಲಿಂಗದಿಂದಾಯಿತ್ತು ಸಕಲ ನಿಃಕಲ ಶಿವಶಕ್ತ್ಯಾತ್ಮಕವಪ್ಪ ಸದಾಶಿವ. ಆ ಸದಾಶಿವನ ಪಂಚಮುಖದಿಂದಾದವು ಪಂಚಭೌತಿಕ. ಆ ಪಂಚಭೌತಿಕದಿಂದಾದವು ಪಂಚವಿಶಂತಿತತ್ವಂಗಳು. ಅದೆಂತೆಂದಡೆ: ಅನಿರ್ವಾಚ್ಯಪದಂ ವಸ್ತುಸ್ವಲೀಲಾನಂದ ಕಾರಣಂ | ಸ್ವಯಮೇವ ಸ್ವಯಂಭೂತ್ವಾಸ್ಸ್ವಯಮೇವದ್ವಿಧಾ ಭವೇತ್ || ಶಿವಂ ಬ್ರಹ್ಮೇತಿಪ್ರಾಹುಃ ಶಕ್ತಿಸ್ಚೈವಾಂಗಮುಚ್ಯತೇ | ಶಿವಶಕ್ತಿ ಸಮಾಯೋಗಂ ಜಗತ್ಸೃಷ್ಟ್ಯಾರ್ಥಕಾರಣಂ || ಈಶಾನಾದ್ಯೋಮಸಂಭೂತಿಸ್ತತ್ಪುರ್ಷಾದ್ವಾಯ ಸಂಭವಃ | ಅಘೋರಾದ್ವಹ್ನಿರಿತ್ಯುಕ್ತಂ ವಾಮದೇವಾದ್ಜಲಸ್ತತಥಾ || ಸದ್ಯೋಕಾತಾದಿಯಂ ಪೃಥ್ವೀ ಶಿವವಕ್ತ್ರಾದ್ವಿನಿರ್ಗತಾ | ಕರ್ಮಾಖ್ಯಪೃಥ್ವಿ ಸಂಭೂತಿರ್ವಿಷಯಾಃ ಜಲಸಂಭವಃ || ಅಗ್ನಿಜಾತೇಂದ್ರಿಯಂ ಜ್ಞೇಯಂ ಮರುನ್ಮಾರುತಪಂಚಕಃ | ನಭಾತ್ಕರಣ ಸಂಜಾತಮಿತಿ ಜ್ಞಾತ್ಪಂಚವಿಂಶತಿಃ | ಎಂದುದಾಗಿ, ಆ ಪಂಚಮಿಂಶತಿತತ್ವವೇ ದೇಹದೇಹಿಗಳೆಂಬ ನಾಮದಿಂ ಪಿಂಡವಾಯಿತ್ತು. ಆ ಪಿಂಡಮಧ್ಯದಲ್ಲಿ ಮರದೊರದಿರವನೆಚ್ಚತ್ತಂತೆ ವಿವೇಕ ತಲೆದೋರಲು, ಆ ವಿವೇಕದಿಂ ತಾನಾರಿದೆಲ್ಲಿಯದೆತ್ತಣ ಮರವೆಯೆಂದು ವಿಚಾರಿಸಿ, ಅದೆಂತೆಂದಡೆ: ಯಥಾ ಪೂರ್ವಂ ಜಾಗ್ರತೀತಃ ಪಶ್ಚಾತ್ಸುಪ್ತಿಮನುಭೂಯ | ಪಶ್ಚಾತ್ಜಾಗರಣಮೇವಾನು ಸಂಧತ್ತೇ ತಥಾಪಿಂಡಭೂತೇ | ಸ್ವಸ್ಮಿನೇದ ವಿಚಾರ ಜ್ಞಾನಮುತ್ಪದ್ಯತೇ ಇತಿ || ಕೋಹಂ ಕಥಮಯಂ ದೋಷಸ್ಸಂಸಾರಾಖ್ಯ ಉಪಾಗತಃ | ನೇತಿ ನೇತಿ ಪರಾಮರ್ಶೋ ವಿಚಾರಯಿತಿ ಕಥತೇ || ಮನೋವಿಲಾಸ ಸಂಸಾರ ಇತಿ [ಏನ ] ಪ್ರಕೀರ್ತತೇ | ಪುತ್ರದಾರಾದಿ ಸಂಸಾರಃ ಪುಂಸಾಂ ಸಂಮೂಢ ಚೇತಸಾಂ || ಜ್ಞಾತೇ ಸಂಸಾರ ಪಿಂಡೇಸ್ಮಿನ್ ಜಿಗುಪ್ಸಾದೋಷದರ್ಶನಾತ್ | ವೈರಾಗ್ಯಪ್ರಾಪ್ತ ಮೋಕ್ಷಸ್ಯ ಸಂಸಾರೋ ಹೇಯವಾನ್ ಭವೇತ್ || ಎಂದುದಾಗಿ, ಪಿತ ಮಾತೆ ಸತಿಸುತ ಸೋದರ ಮೊದಲಾದ ಸರ್ಮಸಂಸಾರಮಂ ನಿವೃತ್ತಿಯಂ ಮಾಡಿ, ಗುರುಸನ್ನಿಧಿಯಲ್ಲಿ‘ಯದಿ ಅಹಂ ಕಃ’ ಎಲೆ ಶ್ರೀಗುರುವೆ ಎನೆ, ‘ತ್ವಂ ತತ್ತ್ವಮಸಿ’ ಎಂಬ ಗುರುವಚನಂ ತಿಳಿದು, ಅದೆಂತೆಂದಡೆ: ಕೋಹಮಿತ್ಯಬ್ರವಿದ್ಧೇಹಿ ಗುರುಂ ಪರಮಕಾರಣಂ | ಗುರುಸ್ತತ್ವಮಸೀತ್ಯಾಹ ಸತ್ಯಾರ್ಥಂ ಕರುಣಾನಿಧಿಃ | ತತ್ವದಂ ಲಿಂಗಮಾಖ್ಯಾತಮಂಗಂ ತ್ವಂ ಪದಮೀರಿತಂ | ಸಂಯೋಗೋಸಿಪದಂ ಪ್ರೋಕ್ತಮನೋರಂಗಲಿಂಗಯೋಃ || ಎಂದುದಾಗಿ ತತ್ ಲಿಂಗ ತ್ವಂ ಅಂಗ, ಅಸಿಯೆಂದು ಸಮರಸ. ಇಂತೀ ತ್ರಿವಿಧಮನರಿದರಿವಿನಗ್ರದ ಕೊನೆಯ ಮೊನೆಯಬೆಳಗು ತಾನೆ, ನಮ್ಮ ಪರಮಗುರು ನಂಜುಂಡಶಿವನು.