Index   ವಚನ - 22    Search  
 
ವೇದ ಶಾಸ್ತ್ರಾಗಮ ತರ್ಕತಂತ್ರ ಇತಿಹಾಸ ನಾನಾಪುರಾಣ ಪುರಾತನ ವಚನವ ಕಲಿತರೇನೊ? ಗುರುವಿನಲ್ಲಿ ವಿಶ್ವಾಸಿಗಳಲ್ಲ, ಲಿಂಗದಲ್ಲಿ ನಿಷ್ಠೆಯುಳ್ಳವರಲ್ಲ, ಜಂಗಮದಲ್ಲಿ ಸಾವಧಾನಿಗಳಲ್ಲ, ಪ್ರಸಾದದಲ್ಲಿ ಪರಿಣಾಮಿಗಳಲ್ಲ, ಪಾದೋದಕದಲ್ಲಿ ಪರಮಾನಂದಿಗಳಲ್ಲ. ಇಂತೀ ಪಂಚಾಚಾರವನರಿದು ತಾನಳಿದುಳಿವ ಭೇದವನರಿಯದೆ, ನಾನು ಭಕ್ತ ನಾನು ವಿರಕ್ತನೆಂದರೆ ನಗರೆ ನಿಮ್ಮ ಶರಣರು! ಪರಮಗುರುವೆ ನಂಜುಂಡಶಿವಾ.