ವಾಯುವಿಲ್ಲದ ಅಂಬುಧಿಯಲ್ಲಿ ಬುದ್ಬುದ ಸ್ಪುರಿಸುತ್ತಿಹುದು ಹೇಗೆ ಹಾಂಗೆ,
ನಿವಾತಸ್ಥಾನದ ದೀವಿಗೆಯಲ್ಲಿ ಚಲನತ್ವ ಹೇಗೆ ಹಾಂಗೆ,
ನಿತ್ಯನಿರವಯಖಂಡ ಪರಿಪೂರ್ಣ ಪರಬ್ರಹ್ಮದ
ಕಿಂಚಿತ್ ಲೀಲಾಸ್ಪುರಣೆಯೇ ಜೀವನು.
ಅದೆಂತೆಂದಡೆ:
ಬ್ರಹ್ಮಣಸ್ಪುರಣಂ ಕಿಂಚಿತ್ ಅವಾತಾಂಬುಧೇರೇವವಾ |
ದೀಪಸ್ಯಾಪ್ಯ ನಿವಾತಸ್ಯ ತಂ ಜೀವಂ ವಿದ್ಧಿರಾಘವ ||
ಎಂದುದಾಗಿ, ಆ ಜೀವನೂ ಪರಮನೂ ಉಪಾಸ್ಯ ಉಪಾಸಕರೆಂದು
ಪೂಜ್ಯಪೂಜಕರೆಂದು, ಸಾಧ್ಯಸಾಧಕರೆಂದು, ಗುರುಶಿಷ್ಯರೆಂದು
ಶಿವಾತ್ಮರೆಂದು ಹೀಂಗೆ ಅನಂತ ಭೇದಾಭೇದಂಗಳಂ
ಕೂಡಿಕೊಂಡು ವಿನೋಧಿಸುತ್ತಿಹರು. ಅದೆಂತೆಂದಡೆ:
ಉಪಾಸಸ್ಯೋಪಾಸಕೌ ಪೂಜ್ಯಪೂಜಕೌ ಸಾಧ್ಯಸಾಧಕೌ |
ಗುರುಶಿಷ್ಯೌ ಶಿವಾತ್ಮನೌ ನಿಗದ್ಯೋತೇ ಮಹಾತ್ಮಭಿಃ ||
ಎಂದುದಾಗಿ, ತನ್ನ ಲೀಲೆವಿಡಿದೆರಡಾಗಿ, ಆ ಲೀಲೆ ನಿಂದರೆ
‘ಏಕಮೇವನದ್ವಿತೀಯಾಯತಸ್ಥೇ’ ಎಂಬ ಶ್ರುತಿಯನೊಳಕೊಂಡು ನಿಂದುದು.
ಅದೆಂತೆಂದಡೆ:
ಏಕೋ ಸ್ವಶಕ್ತಿಭಿನ್ನೇ ಬಹುನಾಸ್ಯಾತ್ ವಿಲಯೇ |
ಶಕ್ತಿನಾಸ್ತಿದ್ವಯಂ, ಗರ್ಭೀಕೃತಮಾತ್ಮವಸ್ತು ||ಎಂದುದಾಗಿ,
ನಿತ್ಯಪರಿಪೂರ್ಣ ಸಚ್ಚಿದಾನಂದ ಪರಬ್ರಹ್ಮ,ಪರಮಗುರು ನಂಜುಂಡಶಿವಾ,
ನಿಮ್ಮ ಲೀಲೆಯ ಘನವ ನೀವೇ ಬಲ್ಲಿರಿ.
Art
Manuscript
Music
Courtesy:
Transliteration
Vāyuvillada ambudhiyalli budbuda spurisuttihudu hēge hāṅge,
nivātasthānada dīvigeyalli calanatva hēge hāṅge,
nityaniravayakhaṇḍa paripūrṇa parabrahmada
kin̄cit līlāspuraṇeyē jīvanu.
Adentendaḍe:
Brahmaṇaspuraṇaṁ kin̄cit avātāmbudhērēvavā |
dīpasyāpya nivātasya taṁ jīvaṁ vid'dhirāghava ||
endudāgi, ā jīvanū paramanū upāsya upāsakarendu
pūjyapūjakarendu, sādhyasādhakarendu, guruśiṣyarendu
śivātmarendu hīṅge ananta bhēdābhēdaṅgaḷaṁ
kūḍikoṇḍu vinōdhisuttiharu. Adentendaḍe:
Upāsasyōpāsakau pūjyapūjakau sādhyasādhakau |
Guruśiṣyau śivātmanau nigadyōtē mahātmabhiḥ ||
endudāgi, tanna līleviḍideraḍāgi, ā līle nindare
‘ēkamēvanadvitīyāyatasthē’ emba śrutiyanoḷakoṇḍu nindudu.
Adentendaḍe:
Ēkō svaśaktibhinnē bahunāsyāt vilayē |
śaktināstidvayaṁ, garbhīkr̥tamātmavastu ||endudāgi,
nityaparipūrṇa saccidānanda parabrahma,paramaguru nan̄juṇḍaśivā,
nim'ma līleya ghanava nīvē balliri.