Index   ವಚನ - 23    Search  
 
ಷಟ್ ಸ್ಥಲದ ಸೃಷ್ಠಿಯನರಿದಾಚರಿಸುವ ಪರಿ ಯಾವುದೆಂದರೆ; ಐಕ್ಯ ಶರಣ ಪ್ರಾಣಲಿಂಗಿ ಪ್ರಸಾದಿ ಮಾಹೇಶ್ವರ ಭಕ್ತರೆಂದಿಂತು ಷಟ್ ಸ್ಥಲವಾರು, ಅದೆಂತೆಂದಡೆ: ಐಕ್ಯಂ ಶರಣಮಿತ್ಯುಕ್ತಂ ಪ್ರಾಣಲಿಂಗಿ ಪ್ರಸಾದಿ ಚ | ಮಾಹೇಶ್ವರಸ್ತಥಾ ಭಕ್ತಪ್ರೋಚ್ಯತೇ ಸೃಷ್ಠಿಮಾರ್ಗತಃ || ಎಂದುದಾಗಿ, ಈ ಸ್ಥಲಂಗಳಿಗೆ ಅಂಗಗಳಾವಾವವೆಂದಡೆ: ಆತ್ಮ ಆಕಾಶ ವಾಯು ಅಗ್ನಿ ಅಪ್ಪು ಪೃಥ್ವಿ ಎಂದಿಂತು ಆರು ಅಂಗಂಗಳ. ಅದೆಂತೆಂದಡೆ: ಆತ್ಮನಃ ಆಕಾಶಃ ಸಂಭೂತಃ ಆಕಾಶಾದ್ವಾಯು ಸಂಭವಃ | ವಾಯೋರಗ್ನಿಃ ಸಮುತ್ಪನ್ನಪರರಗ್ನೇರಾವಃ ಉದಾಹೃತಾಃ | ಅದ್ಭ್ಯಃಪೃಥುವೀ ಸಂಭೂತಿರ್ಲಕ್ಷಣ್ಯೆಕ ಪ್ರಭಾವತಃ || ಎಂದುದಾಗಿ, ಈ ಅಂಗಂಗಳಿಗೆ ಹಸ್ತಂಗಳಾವಾವವೆಂದಡೆ: ಭಾವ ಜ್ಞಾನ ಮನ ಅಹಂಕಾರ ಬುದ್ಧಿ ಚಿತ್ರವೆಂದಿಂತು ಆರು ಹಸ್ತಂಗಳು. ಅದೆಂತೆಂದಡೆ: ವಸ್ತುನಾ ಭಾವ ಉತ್ಪನ್ನೋ ಭಾವಾತ್ ಜ್ಞಾನಸಮುದ್ಭವಃ | ಜ್ಞಾನಾಚ್ಚಮನ ಉತ್ಪನ್ನಂ ಮನಸೋಹಂಕೃತಿಸ್ತಥಾ | ಅಹಂಕಾರಾತ್ತಥಾ ಬುದ್ಧಿಃ ಬುದ್ಧಿಶ್ವಿತ್ತ ಸಮುದ್ಭವಃ | ಎಂದುದಾಗಿ, ಈ ಹಸ್ತಂಗಳಿಗೆ ಸಾದಾಖ್ಯಂಗಳಾವಾವವೆಂದಡೆ: ಮಹಾ ಶಿವ ಅಮೂರ್ತಿ ಮೂರ್ತಿ ಕರ್ತೃ ಕರ್ಮವೆಂದಿಂತು ಆರು ಸಾದಾಖ್ಯಂಗಳು.ಅದೆಂತೆಂದಡೆ: ಮಹಾನ್ ಚ ಶಿವ ಇತ್ಯುಕ್ತಃ ಅಮೂರ್ತಿರ್ ಮೂರ್ತಿರುಚ್ಯತೇ | ಕರ್ತೃಸ್ಸ್ಯಾತ್ಕರ್ಮಮಿತ್ಯೇತ ಷಟ್ ಸಾದಾಖ್ಯಮಿತೀರಿತಾಃ || ಎಂದುದಾಗಿ, ಈ ಸಾದಾಖ್ಯಂಗಳಿಗೆ ಶಕ್ತಿಗಳಾವಾವವೆಂದಡೆ: ಚಿತ್ತು ಪರಾ ಆದಿ ಇಚ್ಛಾ ಜ್ಞಾನ ಕ್ರಿಯಾ ಎಂದಿತು ಆರು ಶಕ್ತಿಗಳು. ಅದೆಂತೆಂದಡೆ: ವಸ್ತೋರ್ಜಾತಾ ಚ ಚಿಚ್ಛಕ್ತೇಶ್ಚ ಪರೋದ್ಭವಃ | ಪರೋದ್ಭವಸ್ತ್ವಾದಿಸ್ತ್ಯಾತ್ ಅದೇರಿಚ್ಛಾ ಸಮುದ್ಭವಃ | ಇಚ್ಛಾ ಜ್ಞಾನ ಮಸುತ್ಪತ್ತಿಃ ಜ್ಞಾನಾತ್ತಥಾ ಕ್ರಿಯೋದ್ಭವಃ || ಎಂದುದಾಗಿ, ಈ ಶಕ್ತಿಗಳಿಗೆ ಲಿಂಗಂಗಳಾವಾವವೆಂದಡೆ: ಮಹಾಪ್ರಸಾದ ಜಂಗಮ ಶಿವ ಗುರು ಆಚಾರವೆಂದಿಂತು ಆರು ಲಿಂಗಗಳು ಆದೆಂತೆಂದಡೆ: ಮಹಾಲಿಂಗೇ ಸಮಾಖ್ಯಾತಂ ಪ್ರಸಾದಂ ಲಿಂಗಮುದ್ಭವಂ| ತತಃ ಪ್ರಸಾದಲಿಂಗೇ ಚ ಜಾಂಗಮಂ ಲಿಂಗಮುದ್ಭವಂ || ತಥಾ ಜಂಗಮಲಿಂಗೇ ಚ ಶಿವಲಿಂಗಂ ಸಮುದ್ಭವಂ | ಶಿವಲಿಂಗೇ ತಥಾಚೈವ ಗುರುಲಿಂಗಂ ಸಮುದ್ಭವಃ| ಗುರುಲಿಂಗೇ ತಥಾಚಾರಲಿಂಗಸ್ಯಾಪಿ ಸಮುದ್ಭವಃ || ಎಂದುದಾಗಿ, ಈ ಲಿಂಗಂಗಗಳಿಗೆ ಕಳೆಗಳಾವಾವವೆಂದಡೆ: ಶಾಂತ್ಯತೀತ್ತೋತ್ತರ ಶಾಂತ್ಯತೀತ ಶಾಂತಿ ವಿದ್ಯೆ ಪ್ರತಿಷ್ಠೆ ನಿವೃತ್ತಿ ಎಂದಿಂತು ಕಳೆಗಾರು. ಅದೆಂತೆಂದಡೆ: ಶಾಂತ್ಯತೀತೋತ್ತರೇಚೈವ ಶಾಂತ್ಯತೀತೋಭವೇತ್ತಥಾ | ಶಾಂತಿರ್ವಿದ್ಯಾಪ್ರತಿಷ್ಠಾ ಚ ನಿವೃತ್ತಿಃ ಷಟ್ಕಲಾ ಸ್ಮೃತಾಃ || ಎಂದುದಾಗಿ, ಈ ಕಳೆಗಳಿಗೆ ಮಖಂಗಳಾವಾವವೆಂದಡೆ : ಹೃದಯ ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂದಿತು ಆರು ಇಂದ್ರಿಯಂಗಳೆ ಮುಖಂಗಳು, ಅದೆಂತೆಂದಡೆ : ಹೃಚ್ಚಶ್ರೋತ್ರಂ ತ್ವಕ್ ಚೈವ ನೇತ್ರಂ ಜಿಹ್ವಾ ತಥೈವ ಚ| ಘ್ರಾಣಶ್ಚ ಇಂದ್ರಿಯಂ ಷಟ್ಕ ವಕ್ತ್ರಮೇವ ಸದಾಭವೇತ್ || ಎಂದುದಾಗಿ, ಈ ಮುಖಂಗಳಿಗೆ ಪದಾರ್ಥಂಗಳಾವಾವವೆಂದಡೆ: ಪರಿಣಾಮ ಶಬ್ದಸ್ಪರ್ಶ ರೂಪ ರಸ ಗಂಧವೆಂದಿಂತು ಆರು ಪದಾರ್ಥಂಗಳು. ಅದೆಂತೆಂದಡೆ: ತೃಪ್ತಿಶ್ವ ಶಬ್ದಮಿತ್ಯುಕ್ತಂ ಸ್ಪರ್ಶರೂಸ್ತಥೈವ ಚ | ರಸಶ್ಚ ಗಂಧಮಿತ್ಯೇತ ಪದಾರ್ಥಂ ಚ [ನಿರೂಪಿತಃ] || ಎಂದುದಾಗಿ, ಈ ಅರ್ಪಿತಂಗಳಿಗೆ ಭಕ್ತಿಗಳಾವಾವವೆಂದಡೆ: ಸಮರಸಾನಂದ ಅನುಬಂಧ ಅವಧಾನ ನ್ಯೇಷ್ಠೆ ವಿಶ್ವಾಸವೆಂದಿಂತು ಅರುವಿಧಭಕ್ತಿ. ಅದೆಂತೆಂದಡೆ: ಸಮರಸಶ್ಚೈವಮಾನಂದನುಭಾವೋತ್ಸಾವಧಾನಃ | ನೈಷ್ಠಿರಿ ಶ್ರದ್ಧೇಮಿತ್ಯೇ ಚ ಭಕ್ತಿಷಡ್ವಿಧರುಚ್ಯತೇ || ಎಂದುದಾಗಿ, ಇವಕ್ಕೆ ಸಂಬಂಧ ವಿವರಗಳಾವಾವವೆಂದಡೆ: ಭಕ್ತಂಗೆ: ಪೃಥ್ವಿಯಂಗ, ಚಿತ್ತಹಸ್ತ ಕರ್ಮಸಾದಾಖ್ಯ, ಕ್ರಿಯಾಶಕ್ತಿ, ಆಚಾರಲಿಂಗ, ನಿವೃತ್ತಿಕಳೆ, ಘ್ರಾಣಮುಖ, ಗಂಧ ಪದಾರ್ಥ, ವಿಶ್ವಾಸಭಕ್ತಿ. ಮಾಹೇಶ್ವರಂಗೆ: ಅಪ್ಪು ಅಂಗ, ಬುದ್ಱಿಹಸ್ತ, ಕರ್ತೃಸಾದಾಖ್ಯ,ಜ್ಞಾನಶಕ್ತಿ, ಗುರುಲಿಂಗ, ಪ್ರತಿಷ್ಠೆಕಳೆ, ಜಿಹ್ವೆಮುಖ,ರುಚಿ ಪದಾರ್ಥ, ನೈಷ್ಠಿಕಾಭಕ್ತಿ. ಪ್ರಸಾದಿಗೆ: ಅಗ್ನಿ ಅಂಗ, ಅಹಂಕಾರಹಸ್ತ ಮೂರ್ತಿಸಾದಾಖ್ಯ ಇಚ್ಛಾಶಕ್ತಿ ಶಿವಲಿಂಗ, ವಿದ್ಯಾಕಳೆ, ನೇತ್ರಮುಖ, ರೂಪ ಪದಾರ್ಥ, ಅವಧಾನಭಕ್ತಿ ಪ್ರಾಣಲಿಂಗಿಗೆ: ವಾಯಅಂಗ, ಮನಹಸ್ತ, ಅಮೂರ್ತಿಸಾದಾಖ್ಯ ಇಚ್ಛಾಶಕ್ತಿ, ಶಿವಲಿಂಗ, ವಿದ್ಯಾಕಳೆ, ನೇತ್ರಮುಖ, ರೂಪ ಪದಾರ್ಥ, ಅವಧಾನಭಕ್ತಿ. ಪ್ರಾಣಲಿಂಗಿಗೆ : ವಾಯು ಅಂಗ, ಮನಹಸ್ತ, ಅಮೂರ್ತಿಸಾದಾಖ್ಯ, ಆದಿಶಕ್ತಿ, ಜಂಗಮಲಿಂಗ, ಶಾಂತಿಕಳೆ, ತ್ವಕ್ಕುಮುಖ, ಸ್ಪರ್ಶನ ಪದಾರ್ಥ, ಅನುಭಾವಭಕ್ತಿ. ಶರಣಂಗೆ: ಆಕಾಶ ಅಂಗ, ಜ್ಞಾನಹಸ್ತ, ಶಿವಸಾದಾಖ್ಯ ಪರಾಶಕ್ತಿ, ಪ್ರಸಾದಲಿಂಗ, ಶಾಂತ್ಯತೀತಕಳೆ, ಶ್ರೋತ್ರಮುಖ, ಶಬ್ದ ಪದಾರ್ಥ, ಆನಂದಭಕ್ತಿ. ಐಕ್ಯಂಗೆ: ಆತ್ಮನಂಗ, ಭಾವಹಸ್ತ, ಮಹಾಸಾದಾಖ್ಯ, ಚಿಚ್ಛಕ್ತಿ, ಮಹಾಲಿಂಗ, ಶಾಂತ್ಯತೀತೋತ್ತರಕಳೆ, ಹೃದಯಮುಖ, ಪರಿಣಾಮ ಪದಾರ್ಥ, ಸಮರಸಭಕ್ತಿ. ಇಂತೀ ಷಟ್ ಸ್ಥಲಸಂಪನ್ನನಾಗಿ ಆಚರಿಸುವಾತನೆ ತೂರ್ಯಾತೂರ್ಯನೆಂಬರಿವಿನ ಆದಿಮಧ್ಯವಸಾನದಲ್ಲಿ ತೆರಹಿಲ್ಲದ ಕುರುಹಿಲ್ಲದ ಬರಿಯ ಬೆಳಗು ತಾನೆ, ನಮ್ಮ ಪರಮಗುರು ನಂಜುಂಡ ಶಿವನು.