ವೇದ ಶಾಸ್ತ್ರಾಗಮ ತರ್ಕತಂತ್ರ ಇತಿಹಾಸ
ನಾನಾಪುರಾಣ ಪುರಾತನ ವಚನವ ಕಲಿತರೇನೊ?
ಗುರುವಿನಲ್ಲಿ ವಿಶ್ವಾಸಿಗಳಲ್ಲ, ಲಿಂಗದಲ್ಲಿ ನಿಷ್ಠೆಯುಳ್ಳವರಲ್ಲ,
ಜಂಗಮದಲ್ಲಿ ಸಾವಧಾನಿಗಳಲ್ಲ, ಪ್ರಸಾದದಲ್ಲಿ ಪರಿಣಾಮಿಗಳಲ್ಲ,
ಪಾದೋದಕದಲ್ಲಿ ಪರಮಾನಂದಿಗಳಲ್ಲ.
ಇಂತೀ ಪಂಚಾಚಾರವನರಿದು ತಾನಳಿದುಳಿವ ಭೇದವನರಿಯದೆ,
ನಾನು ಭಕ್ತ ನಾನು ವಿರಕ್ತನೆಂದರೆ ನಗರೆ ನಿಮ್ಮ ಶರಣರು!
ಪರಮಗುರುವೆ ನಂಜುಂಡಶಿವಾ.
Art
Manuscript
Music
Courtesy:
Transliteration
Vēda śāstrāgama tarkatantra itihāsa
nānāpurāṇa purātana vacanava kalitarēno?
Guruvinalli viśvāsigaḷalla, liṅgadalli niṣṭheyuḷḷavaralla,
jaṅgamadalli sāvadhānigaḷalla, prasādadalli pariṇāmigaḷalla,
pādōdakadalli paramānandigaḷalla.
Intī pan̄cācāravanaridu tānaḷiduḷiva bhēdavanariyade,
nānu bhakta nānu viraktanendare nagare nim'ma śaraṇaru!
Paramaguruve nan̄juṇḍaśivā.