Index   ವಚನ - 8    Search  
 
ಅಂಬಿನ ಹಿಳಿಕಿನಲ್ಲಿ ಕಟ್ಟಿದ ವಿಹಂಗನ ಗರಿಯಂತೆ, ತಾಗುವ ಮೊನೆಗಾಧಾರವಾಗಿ ದೂರ ಎಯಿದುವುದಕೆ ಸಾಗಿಸುವ ಗುಣ ತಾನಾಗಿ ಕ್ರೀ ಅರಿವಿನ ಭೇದದ ನಿರಿಗೆಯ ಕಾಬನ್ನಕ್ಕ, ಅರಿವು ಕುರುಹು ಎರಡು ಬೇಕೆಂದನಂಬಿಗರ ಚೌಡಯ್ಯ.