Index   ವಚನ - 17    Search  
 
ಅದ್ವೈತವ ನುಡಿದು,ಅಬದ್ಧ ಅಂಗಕ್ಕಾಗಿ ಬದ್ಧರ ಬಾಗಿಲಲ್ಲಿ ಹೊದ್ದುಕೊಂಬ[ರ]ಲ್ಲಾ ಎಂದು ಮತ್ತೆ ಅದ್ವೈತಕ್ಕೆ ಕದ್ದೆಹತನವೆ? ಇಂತೀ ಅಬದ್ಧರ ಕಂಡು ಮುನ್ನವೆ ಹೊದ್ದಬೇಡ, ಎಂದನಂಬಿಗ ಚೌಡಯ್ಯ.