Index   ವಚನ - 25    Search  
 
ಅರಳೆಯ ಮರನು ವಿಷ್ಣುಕಾಂತಿ ಬನ್ನಿ ಮುತ್ತಕ ತೊಳಚಿ ಹರಿ ಹರಿಯೆಂದು ಹೊಡ[ವ]ಡುವಿರಿ. ಎಲ್ಲಿ ಭೋ! ಎಲ್ಲಿ ಭೋ! ನಿಮ್ಮ ನಿಮ್ಮ ಹೊಡವಡುವ ದೈವಗಳೆಲ್ಲಾ ಗಿಡುಮರನಾಗಿ ಹೋದವಲ್ಲಾ! ನಿಮ್ಮ ನಡೆಯೆಲ್ಲಾ ಅನಾಚಾರ, ನುಡಿಯೆಲ್ಲಾ ಶಿವದ್ರೋಹ! ಇವದಿರ ಗಡಣ ಬೇಡೆಂದನಂಬಿಗರ ಚೌಡಯ್ಯ.