Index   ವಚನ - 64    Search  
 
ಎಲುವೆಂಬ ಹಂಜರ ಥಟ್ಟಾಗಿ, ಉಭಯವ ಘಟಿಸಿದ ತೊಗಲು ಬ್ರಹ್ಮವೆಂಬ ಅಳಿಲೆಯ ಕಾಯಲ್ಲಿ ವಿಷ್ಣುವೆಂಬ ನೀರ ಹೊಯಿದು, ರುದ್ರನೆಂಬ ಚೂರ್ಣದಲ್ಲಿ ಖಾರಕ್ಕೆ ಮೆಟ್ಟಲಾಗಿ, ತೊಗಲ ಹೊಲಸು ಕೆಟ್ಟಿತ್ತು, ಹರುಗುಲ ಹುದಿಗಿತ್ತು. ವರ್ತನವೆಂಬ ಹುಟ್ಟ ಹಿಡಿದು, ಮಾಟಕೂಟವೆಂಬ ಹೊಳೆಯಲ್ಲಿ ಕೂಟದವರು ದಾಟುತ್ತಿದ್ದಾರೆ, ಎಂದನಂಬಿಗರ ಚೌಡಯ್ಯ.