Index   ವಚನ - 126    Search  
 
ಗುರುವೆಂಬೆನೆ ಹಲಬರ ಮಗ, ಲಿಂಗವೆಂಬೆನೆ ಕಲುಕುಟಿಕನ ಮಗ, ಪ್ರಸಾದವೆಂಬೆನೆ ಒಕ್ಕಲಿಗನ ಮಗ, ಪಾದೋದಕವೆಂಬೆನೆ ದೇವೇಂದ್ರನ ಮಗ ಈಸುವ ಹಿಡಿಯಲೂ ಇಲ್ಲ, ಬಿಡಲೂ ಇಲ್ಲ. ತನ್ನೊಳಗ ನೋಡೆಂದನಂಬಿಗರ ಚೌಡಯ್ಯ.