Index   ವಚನ - 168    Search  
 
ನುಡಿವ ಶಬ್ದವೆ ಕಾಯದ ಕಳವಳ, ಒಡಲುಗೊಂಡವರೆಲ್ಲಾ ಕೇಳಿರಯ್ಯಾ. ಸಂಜೆ ನೇಮ ನಿತ್ಯ ಜಪ ತಪ ಸಮಾಧಿ ಏನೆಂದಡೇನೆಂದು ಬರೆವಂತೆ ಬರೆವ ನುಡಿಯೊಳಗಿರ್ದು, ನುಡಿ ತಪ್ಪಿದೆನೆಂಬ ಈ ನುಡಿಗೆ ನಾಚುವೆನೆಂದನಂಬಿಗರ ಚೌಡಯ್ಯ.