Index   ವಚನ - 175    Search  
 
ಪಿಸಿತ ನಡುವೆ ಇದ್ದ ಕಿರಾತಂಗೆ ಹೊಸ ವಾಸನೆಯ ಬಲ್ಲನೆ? ಸಕಲವ್ಯಾಪಾರದಲ್ಲಿ ಮೂಡಿ ಮುಳುಗುವವ ಸುಖದ ತದ್ರೂಪ[ವ] ಬಲ್ಲನೆ? ವಿಕಳತೆಗೊಂಡು ಅಖಿಳರ ಕೂಡಿ ಸುಖದುಃಖದಲ್ಲಿ ಬೇವವಂಗೆ ಅಕಳಂಕತನವುಂಟೆ? ಎಂದನಂಬಿಗರ ಚೌಡಯ್ಯ.