Index   ವಚನ - 179    Search  
 
ಪೊಡವಿಗೀಶ್ವರ ಗೌರಿಯೊ[ಡನೆ] ಮದುವೆಯಾದಂದು, ಒಡನಾಡಿದ ಮಾಧವ ಗೋವನಾದ, ಮಿಗೆ ಓದಿದ ಬ್ರಹ್ಮ ಹೋತನ ತಿಂದ, ಎಡೆಯಲಾದ ಜಿನ್ನ ಉಟ್ಟುದ ತೊರೆದ. ಇವರ ಪೊಡಮಟ್ಟು ಪೊಡಮಟ್ಟು ಧಾತುಗೆಟ್ಟವರ ಕೇಡಿಂಗೆ ಕಡೆಯಿಲ್ಲೆಂದನಂಬಿಗರ ಚೌಡಯ್ಯ.