Index   ವಚನ - 184    Search  
 
ಬರೆದು ಓದಿಸುವ ಅಕ್ಕರಿಗಳೆಲ್ಲ ನೀವು ಕೇಳಿರೋ: ತರ್ಕ ವ್ಯಾಕರಣ ಛಂದಸ್ಸು ನಿಘಂಟು ವೇದಶಾಸ್ತ್ರವನೋದಿ ಕೇಳಿ ಗಂಗೆಗೆ ಹರಿವವರನೇನೆಂಬೆ? ಪರವಧುವೆಂಬುದನರಿಯಿರಲ್ಲಾ! ನೆರೆದಿರ್ದ ಪಾಪವ ಹೊನಲಿನಲ್ಲಿ ಕಳೆದೆನೆಂಬ ಅಣ್ಣಗಳ ಬೆಡಗು ಬೇಡೆಂದಾತನಂಬಿಗರ ಚೌಡಯ್ಯ.