Index   ವಚನ - 186    Search  
 
ಬೆಟ್ಟದ ಲಿಂಗವ ಹಿರಿದು ಮಾಡಿ[ಕೊಂ]ಡು ಪರಿವ ಕೊಟ್ಟಿ ಮೂಳರಿರಾ, ಬಿಟ್ಟುಕೊಡಿ ನಿಮ್ಮ ಇಷ್ಟಲಿಂಗವ. ನಮ್ಮ ಕೈಗೆ ಕೊಡದಿದ್ದಡೆ, ನಟ್ಟನಡುನೀರೊಳಗೊಯ್ದಿ, ಕಟ್ಟಿ ಮುಳುಗಿಸಿ ನಿಮ್ಮನು ಲಿಂಗೈಕ್ಯರ ಮಾಡುವೆನೆಂದಾತ ನಮ್ಮಂಬಿಗರ ಚೌಡಯ್ಯ.