Index   ವಚನ - 258    Search  
 
ಸರ್ವಾಂಗಲಿಂಗವಾದ ಶರಣನ ಕಾಯ ಆವ ದೇಶದಲ್ಲಿ ಆಳಿದಡೇನು? ಎಲ್ಲಿ ಆಳಿದಡೇನು? ಉಳಿದಡೇನು? ಕಾಯ ಉಳಿಯದೆ ಬಯಲಾದಡೇನು? ಅದೇತರಲ್ಲಿ ಹೋದಡು ಲಿಂಗೈಕ್ಯಪದಕ್ಕೆ [ಕುತ್ತ] ಕೊಡಲಿಲ್ಲವೆಂದನಂಬಿಗ ಚೌಡಯ್ಯ.