ಗುರುಕರುಣ ಕಟಾಕ್ಷದಿಂದಾದ ಮೂಲಮಂತ್ರ ಆಧಾರವೆನಿಸುವುದು
ಗುರುಕರುಣದಿಂದಾದ ಸ್ಥೂಲ ಸೂಕ್ಷ್ಮ ಕಾರಣವೆಂಬ ನಿರ್ವಯವು
ಆಧಾರಕ್ಕೆ ಆದಿಬೀಜಾಕ್ಷರವಾಗಿ ತೋರುವುದು.
ಗುರುಕರುಣದಿಂದಲ್ಲದೆ ನಾದ ಬಿಂದು ಕಳಾಚೈತನ್ಯಗೊಂಡು,
ಆದಿಮೂಲಮಂತ್ರವರಿದು ಅಂಗಕ್ಕೆ ಅಸಾಧ್ಯವಾಗಿ ಲಿಂಗಸಮರಸಭಾವವನರಿಯದೆ,
ಆದಿಪರಶಿವಶಕ್ತಿ ಬೀಜಾಕ್ಷರ ಇಂಬುಗೊಂಡು,
ಹದಿನಾಲ್ಕು ಲೋಕದ ವ್ಯವಹಾರ ಸಾಧಿಸಿಕೊಂಡಿರ್ಪುದು.
ಗುರುಕರುಣದಿಂದಾದ ಚಿತ್ತುಸುಚಿತ್ತು ಅಹಂಕಾರ
ಅವಯವಂಗಳು ಆವಾವ ತೆರನಾಗಿ,
ಅಲ್ಪ ಸುಖದ ಇಚ್ಛಾಮಾತ್ರದಿಂದ
ಆ ಓಂ ಬೀಜಾಕ್ಷರಮಂ ಸತ್ತು ಚಿತ್ತಾನಂದ
ಪರಿಪೂರ್ಣ ನೆಲೆಗೊಳ್ಳದೆ ಸತ್ತು ಹುಟ್ಟುವುದಕ್ಕೆ ಯತ್ನವಿಲ್ಲದೆ,
ಸತ್ಯ ಸದಾಚಾರದಲ್ಲಿ ನಿತ್ಯನಿಗುರ್ಣಭರಿತನಾಗಿರ್ಪುದು
ಆದಿಯಾಧಾರ ಬೀಜಾಕ್ಷರ ಮೂಲಮಂತ್ರವೆನಿಸುವುದು
ಕತ್ತಲಿಲ್ಲದ ಬೆಳಗು ನೀನಲ್ಲ[ವೆ],
ನಿಜಗುರು ನಿರಾಲಂಬಪ್ರಭುವೆ.
Art
Manuscript
Music
Courtesy:
Transliteration
Gurukaruṇa kaṭākṣadindāda mūlamantra ādhāravenisuvudu
gurukaruṇadindāda sthūla sūkṣma kāraṇavemba nirvayavu
ādhārakke ādibījākṣaravāgi tōruvudu.
Gurukaruṇadindallade nāda bindu kaḷācaitan'yagoṇḍu,
ādimūlamantravaridu aṅgakke asādhyavāgi liṅgasamarasabhāvavanariyade,
ādiparaśivaśakti bījākṣara imbugoṇḍu,
hadinālku lōkada vyavahāra sādhisikoṇḍirpudu.
Gurukaruṇadindāda cittusucittu ahaṅkāra
avayavaṅgaḷu āvāva teranāgi,
alpa sukhada icchāmātradinda
Ā ōṁ bījākṣaramaṁ sattu cittānanda
paripūrṇa nelegoḷḷade sattu huṭṭuvudakke yatnavillade,
satya sadācāradalli nityanigurṇabharitanāgirpudu
ādiyādhāra bījākṣara mūlamantravenisuvudu
kattalillada beḷagu nīnalla[ve],
nijaguru nirālambaprabhuve.