Index   ವಚನ - 8    Search  
 
ಗುರುಕೃಪಾವಸ್ಥೆಯನು ಆಧರಿಸಿಕೊಂಡಿರ್ಪ ಆತ್ಮನ ಅಂಗಕರಣಂಗಳು ಅಭಿಧಾನವಾಗಿ, ಅಯೋನಿಜಾಕ್ಷರಮಂ ಆದಿಮೂಲಮಂತ್ರ ಮಂಗಳಮಯ ಜ್ಯೋತಿಪ್ರಕಾಶ ಬೆಳಗಿನಿಂದ ಕಂಗಳಮಂಟಪದ ಸುತ್ತ ಶೃಂಗಾರವರ್ಣವಾಗಿ. ಮಾಂಗಲ್ಯಸ್ವರೂಪವಾದ ಗುರುಲಿಂಗ ಜಂಗಮ ಆಚರಣೆಯನು ವಿಚಾರದಿಂದ ಇಂಬಿಟ್ಟುಕೊಂಡು, ಭೂಚರಿಯೆಂಬ ಮಾರ್ಗದಲ್ಲಿ ವ್ಯಾಪಕನಾಗಿರ್ಪುದು. ಯೋಚನಮಂ ಬಿಟ್ಟಿರಬಹುದಲ್ಲದೆ, ಖೇಚರಿ ಸಹಚರಿಯೆಂಬ ಸುಮಾರ್ಗವನು ಆಲೋಚನ ಸೂಚನಾರ್ಥದಿಂದ ನೀಚರ ಸಂಗಮಂ ಮರೆದು, ಸಚರಾಚರ ಪ್ರಾಣಿಗಳಲ್ಲಿ ವಿಷಯಾತುರನಾಗದೆ, ಷಣ್ಮುಖಿ ಶಾಂಭವಿಯೆಂಬ ಸನ್ಮಾರ್ಗದಲ್ಲಿ ಆ ಯೋಚನ ಕಾಲಸೂಚನವಾಗಿ, ಅಪೇಕ್ಷೆಯಿಲ್ಲದೆ ಅಪರೋಕ್ಷ ಮೋಕ್ಷಗತಿಯೆಂದು ಶ್ರುತಿವಾಕ್ಯವಿಡಿದು, ಮೋಕ್ಷಸಿದ್ಧಿ ಮಮಕಾಯ ಮಂತ್ರಕಾಯ ಕರುಣಿ ಗುರುರಾಯ ನೀನಲ್ಲ[ವೆ]. ನಿಜಗುರು ನಿರಾಲಂಬಪ್ರಭುವೆ.