Index   ವಚನ - 22    Search  
 
ಮತ್ತಂ ಸಾಕ್ಷಿ: ಎಲೆ ಮಗನೆ ಯಾಕೊ ಬಾರೊ ಬಾರೆಂದು ಕರೆದು ತನ್ನ ಕರಪಾತ್ರೆಯನು ಕೊಟ್ಟು, ಶಿರದ ಮೇಲೆ ಹಸ್ತವನಿಟ್ಟು, ಈ ನರವಿಂಧ್ಯದೊಳಗೆ ಹರವಿಂದಲಟ್ಟು, ಪ್ರಾಣಿಯಾಗು ನೀನೆಂದು ಇಷ್ಟಪ್ರಾಣಭಾವಾರ್ಥದಲ್ಲಿ ಆ ಶ್ರೀಗುರುನಾಥನು ಶಿಷ್ಯಂಗೆ ತತ್ವಾರ್ಥನ್ಯಾಯಮಂ ಹೇಳುವೆನೆಂದು ಪಾರಮಾರ್ಥ ಹೇ[ಳಿ]. ನಿಮಗೆ ಶ್ರೀಗುರುವಿನಾಜ್ಞೆ ಅಪ್ಪಣೆಯಿಂದ ಕರೆಯಬಂದೆವೆನಲು ಅದೃಷ್ಟ ಪ್ರಾಣಿಗಳು ಹೇಳುವರಲ್ಲಾ, ನಾವು ಬರುವುದಕ್ಕೆ ಹಾಸ್ಯವಾಗಿ ತೋರುತಿರ್ಪುದು. ನಿನ್ನ ವಶದ ಬಲಿ ಸುಕೃತವನು ನಿಮಗೆ ಸ್ವಾಧೀನ ಮೀರಿತೆಂದು ಬ್ರಹ್ಮೋಪಚಾರವಿಲ್ಲವೆಂದು ಪ್ರಲಾಪಿಸಲು, ಆ ಮಹಾಗುರುದೇವನು 'ಎಲೆ ಮಗನೆ ಬಾರೆಂದು' ಕರೆದು, ಅಲ್ಪಸುಖದುಃಖವದು ನಿನಗಿಲ್ಲದೆಹೋಯಿತು. ಕಲ್ಪನೆ ಬಿಡುಗಡೆಯಾಗುವುದೆಂದು ಒಪ್ಪ ಹೆಸರುಗೊಂಡು, ಮುಗ್ಧಸಂಗಯ್ಯನೆಂದನುಭವಿಸು. ಮೃದುವಾಕ್ಯದಿಂದ ಹೃದಯದಲ್ಲಡಗಿ, ಶೂನ್ಯಸಿಂಹಾಸನದಲ್ಲಿ ಕುಳ್ಳಿರಿಸಿ, ತನ್ನ ಕರುಳು ತೆಗೆದು ಕೊರಳಿಗೆ ಹಾಕಿ, ಎನ್ನಳಿಯನೆಂದು ಮಾನಮನ್ನಣೆಯ ಕೊಟ್ಟು, ಬಹುಮಾನದಲಿ ಶ್ರೇಷ್ಠನೆಂದು ಹೇಳಿಕೊಂಬುವಂಥದು ಜ್ಞಾನಗುರುಮೂರ್ತಿ ನೀನೆ ಎನಗಲ್ಲವೆ, ನಿಜಗುರು ನಿರಾಲಂಬಪ್ರಭುವೆ.