Index   ವಚನ - 9    Search  
 
ಅಂಡದಲ್ಲಿಯೊಂದು ಆಕಾರದ ರೂಪು ಹುಟ್ಟಿತ್ತು. ಆ ಆಕಾರದ ರೂಪಿನಲ್ಲಿ ಅನುವಿನ ಮೂರ್ತಿಯ ಭಕ್ತಿ ಹುಟ್ಟಿತ್ತು. ಆ ಭಕ್ತಿಯ ಸುಖ ವಿಸುಖವಾಗಿ ತೋರಿತ್ತು. ವಿಸುಖ ವಿತೃಪ್ತಿಯ ಕಂಡು ತಲೆದೋರಿತ್ತು. ಮೂರ್ತಿಯ ಮೂರ್ತಿಯ ಮುಖವರಳಿ ಸುಖದಲ್ಲಿ ನಿರ್ವಯಲಾಯಿತ್ತಯ್ಯ ಸಂಗಯ್ಯ.